Advertisement
ಇಬ್ಬರು ಸ್ನೇಹಿತರ ಜತೆ ಬಳಾಂತೋಡು ಮಾಯತ್ತಿ ಭಗವತಿ ಕ್ಷೇತ್ರ ಬಳಿಯ ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದಾಗ ನೀರಿನಲ್ಲಿ ಮುಳುಗಿ ಸಾವು ಸಂಭವಿಸಿತು.
ಉಪ್ಪಳ: ಉಪ್ಪಳದಲ್ಲಿರುವ ಖಾಸಗಿ ಬ್ಯಾಂಕ್‌ನ ಎಟಿಎಂಗೆ ತುಂಬಿಸಲಿರುವ ಹಣದೊಂದಿಗೆ ತಲುಪಿದ ವಾಹನದಿಂದ 50 ಲಕ್ಷ ರೂ. ಕಳವು ಮಾಡಿದ ಪ್ರಕರಣದಲ್ಲಿ ಬಂಧಿತ ಆರೋಪಿ ತಮಿಳುನಾಡಿನ ತ್ರಿಚ್ಚಿ ತಿರುಟ್ಟ್ ಗ್ರಾಮದ ಕಾರ್ವರ್ಣನ್ (28)ನಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. 2024ರ ಮಾರ್ಚ್ 27ರಂದು ಉಪ್ಪಳದಲ್ಲಿ ಕಳವು ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ಮುತ್ತು ಕುಮಾರನ್(47)ನನ್ನು ಪೊಲೀಸರು ಬಂಧಿಸಿದ್ದರು. ಇನ್ನೋರ್ವನಿಗಾಗಿ ಶೋಧ ನಡೆಯುತ್ತಿದೆ.