ಮಂಗಳೂರು: ಪ್ರೆಸ್ ಮಾಲೀಕರೊಬ್ಬರು ಸಾಲ ತೀರಿಸಲು ಯೂಟ್ಯೂಬ್ ನೋಡಿಕೊಂಡು 500 ರೂ. ಮುಖಬೆಲೆಯ ನಕಲಿ ನೋಟು ಮುದ್ರಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಲೀಕ ಸೇರಿದಂತೆ ಒಟ್ಟು ನಾಲ್ವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕಾಸರಗೋಡು ನಿವಾಸಿಗಳಾದ ವಿ.ಪ್ರಿಯೇಶ್(38), ಪ್ರೆಸ್ ಮಾಲೀಕ ವಿನೋದ್ ಕುಮಾರ್ ಕೆ.(33), ಅಬ್ದುಲ್ ಖಾದರ್ ಎಸ್.ಎ(58) ಮತ್ತು ಕಡಬದ ಆಯೂಬ್ ಖಾನ್ (51) ಎನ್ನಲಾಗಿದೆ.
500 ಮುಖಬೆಲೆಯ ಖೋಟಾ ನೋಟುಗಳನ್ನು ಮುದ್ರಿಸಿ ಅದನ್ನು ಚಲಾವಣೆ ಮಾಡಲು ಮಂಗಳೂರಿಗೆ ಬಂದಿದ್ದು ಈ ವೇಳೆ ಹಂಪನಕಟ್ಟೆಯ ಲಾಡ್ಜ್ ಒಂದರಲ್ಲಿ ತಂಗಿದ್ದ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ 2,13,500 ಲಕ್ಷ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆ ಕುರಿತು ಮಾಹಿತಿ ನೀಡಿದ ಪೊಲೀಸ್ ಆಯುಕ್ತ (ಸಿಸಿಬಿ) ಗೀತಾ ಡಿ ಕುಲಕರ್ಣಿ ಕಾಸರಗೋಡಿನಲ್ಲಿ ನಕಲಿ ನೋಟು ಮುದ್ರಿಸಿ ಅದನ್ನು ಮಂಗಳೂರು ನಗರದಲ್ಲಿ ಚಲಾವಣೆ ಮಾಡಲು ನಾಲ್ವರ ತಂಡ ನಗರದ ಹಂಪನಕಟ್ಟೆಯಲ್ಲಿರುವ ಲಾಡ್ಜ್ ಒಂದರಲ್ಲಿ ತಂಗಿದ್ದರು ಈ ಕುರಿತು ಮಾಹಿತಿ ಪಡೆದುಕೊಂಡ ನಮ್ಮ ತಂಡ ಲಾಡ್ಜ್ ಮೇಲೆ ದಾಳಿ ನಡೆಸಿ ಪ್ರೆಸ್ ಮಾಲೀಕ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದುಕೊಂಡು ಅವರ ಬಳಿಯಿದ್ದ ನಾಲ್ಕು ಮೊಬೈಲ್ ಫೋನ್ ಹಾಗೂ 9,030 ರೂಪಾಯಿ ನಗದು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: Starbucks CEO: ಕಚೇರಿ ತಲುಪಲು ನಿತ್ಯ 1600 ಕಿ.ಮೀ. ಪಯಣಿಸುವ ಸ್ಟಾರ್ ಬಕ್ಸ್ ಸಿಇಒ