Advertisement
ಬೀದಿ ನಾಯಿ ಕಡಿದು ಬಾಲಕಿಗೆ ಗಾಯಕಾಸರಗೋಡು: ಬೀದಿ ನಾಯಿ ಕಡಿತದಿಂದ ಕಾಸರಗೋಡು ಕೋಟೆಕಣಿ ರಸ್ತೆಯ ಸಿ.ಎ.ಮುಹಮ್ಮದ್ ಬಶೀರ್ ಅವರ ಪುತ್ರಿ ಶಸ್ನ (3) ಗಾಯಗೊಂಡಿದ್ದು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆ ಅಂಗಳದಲ್ಲಿ ಆಟ ಆಡುತ್ತಿದ್ದಾಗ ಬೀದಿ ನಾಯಿ ಬಾಲಕಿಯ ಮುಖ ಹಾಗೂ ಕೈಗೆ ಕಡಿದು ಗಂಭೀರ ಗಾಯಗೊಳಿಸಿದೆ.