ಕಾಸರಗೋಡು : ಜೀವನದುದ್ದಕ್ಕೂ ಪತ್ರಿಕೆಯೊಂದಿಗೆ ಅನಿನಾಭಾವ ಸಂಬಂಧ ಹೊಂದಿರುವ ಅಗ್ಗಿತ್ತಾಯರು ಬರಹಗಾರನಾಗಿಯೂ, ಪತ್ರಿಕೆಯ ಓದುಗರಾಗಿಯೂ ಅನುಭವ ಹಾಗೂ ಅರಿವಿನ ಖಜಾನೆಯನ್ನೇ ಹೊಂದಿರುವವರು. ಪತ್ರಿಕಾ ಮಿತ್ರರಾಗಿರುಗ ಇವರು ಒಳ್ಳೆಯ ಓದುಗ ಹಾಗೂ ಪತ್ರಿಕೆಗಳಿಗೆ ಸಕಾಲದಲ್ಲಿ ವರದಿಗಳನ್ನು ತಲುಪಿಸುವ ಕಾರ್ಯವನ್ನೂ ಮಾಡುತ್ತಿದ್ದರು. ಆದ್ದರಿಂದ ಅವರನ್ನು ಸನ್ನಾನಿಸಿ ಗೌರವಿಸುವ ಮೂಲಕ ಪತ್ರಿಕಾ ದಿನಾಚರಣೆ ಸಂಪನ್ನವಾಯಿತು ಎಂದು ಪತ್ರಕರ್ತ ವೀಜಿ ಕಾಸರಗೋಡು ಅಭಿಪ್ರಾಯಪಟ್ಟರು.
ಇದನ್ನೂ ಓದಿ : ಅಮೆಜಾನ್, ಫ್ಲಿಪ್ ಕಾರ್ಟ್, ಮಿಂತ್ರಾ, ಅಜಿಯೋ ಡಾಟ್ ಕಾಮ್ ಗಳಲ್ಲಿ ಭರ್ಜರಿ ಆಫರ್ ಸೇಲ್
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಜರಗಿದ ಪತ್ರಿಕಾ ದಿನಾಚರಣಾ ಕಾರ್ಯಕ್ರಮದಲ್ಲಿ ಹಿರಿಯ ಪತ್ರಿಕಾ ಮಿತ್ರ, ಸಮಾಜ ಸೇವಕ ಬಾಲಕೃಷ್ಣ ಅಗ್ಗಿತ್ತಾಯ ಮಧೂರು ಅವರಿಗೆ ಗೌರವಾರ್ಪಣೆ ಸಲ್ಲಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗಡಿನಾಡ ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎ ಆರ್ ಸುಬ್ಬಯ್ಯಕಟ್ಟೆ ಕನ್ನಡ ಪತ್ರಕರ್ತ ಸಂಘ ಮಹಾರಾಷ್ಟ್ರ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಶುಭಾಶಂಸನೆಗೈದರು.
ಕಾರ್ಯಕ್ರಮದಲ್ಲಿ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಉಪಾಧ್ಯಕ್ಷರಾದ ಪ್ರೊ ಶ್ರೀನಾಥ್ ಕಾಸರಗೋಡು ಅಧ್ಯಕ್ಷತೆ ವಹಿಸಿದರು.
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಕಾರ್ಯದರ್ಶಿ, ಪತ್ರಕರ್ತ ಅಖಿಲೇಶ್ ನಗುಮುಗಂ ಮಲಯಾಳ ಸಿನಿಮಾ ನಿರ್ದೇಶಕ ಕೃಷ್ಣಕುಮಾರ್ ಬದಿಯಡ್ಕ. ಬಾಲಕೃಷ್ಣ ಅಗ್ಗಿತ್ತಾಯ ಅವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ : ಲಂಕಾ ವಿರುದ್ದದ ಅಂತಿಮ ಪಂದ್ಯಕ್ಕೆ ಇಂಗ್ಲೆಂಡ್ ತಂಡಕ್ಕೆ ಟಾಮ್ ಬ್ಯಾಂಟನ್ ಸೇರ್ಪಡೆ