ಕಾಸರಗೋಡು : ಉಳಿಯತ್ತಡ್ಕ ಪರಿಸರದಲ್ಲಿ ಜ. 10ರಂದು ರಾತ್ರಿ ಪುಳ್ಕೂರು ಪಳ್ಳಂನ ಆಸೀಫ್ ಪಿ.ಎಂ. (30) ಅವರಿಗೆ ಇರಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಎರಿಯಾಲ್ ಪಳ್ಳಂ ರಸ್ತೆಯ ಕ್ವಾರ್ಟರ್ಸ್‌ವೊಂದರಲ್ಲಿ ವಾಸಿಸುತ್ತಿರುವ ಉಸ್ಮಾನ್ ಆಲಿಯಾಸ್ ಚಾರ್ಲಿ ಉಸ್ಮಾನ್ (41)ನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಚಾರ್ಲಿ ಉಸ್ಮಾನ್ 10ರಷ್ಟು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಈತನ ಜತೆಗಿದ್ದ ಉಳಿಯತ್ತಡ್ಕ ಎಸ್.ಪಿ. ನಗರದ ಮೊಹಿದ್ದೀನ್ ಎಂ.ಎಚ್. (27) ಮತ್ತು ಸಿನಾನ್‌ನನ್ನು ಪೊಲೀಸರು ಇತರ ಪ್ರಕರಣಗಳಿಗೆ ಸಂಬಂಧಿಸಿ ಬಂಧಿಸಿದ್ದಾರೆ. ಸಿನಾನ್ ವಿರುದ್ಧ ಎಂಡಿಎಂಎ ಸಂಬಂಧ ಎರಡು ಕೇಸುಗಳಿವೆ.