ಕಾಸರಗೋಡು: ರಸ್ತೆ ಬದಿಯಲ್ಲಿ ಬಿದ್ದು ಸಿಕ್ಕಿದ 50 ಸಾವಿರ ರೂ.ಗಳನ್ನು ಪೊಲೀಸರಿಗೆ ಹಸ್ತಾಂತರಿಸಿ ಯುವಕರು ಪ್ರಾಮಾಣಿಕತೆ ಮೆರೆದಿದ್ದಾರೆ.
ಕೆಪಿ ಆ್ಯಂಡ್ ಎಂಐ ಸೊಸೈಟಿಯ ನೌಕರ ಬ್ಯಾಂಕ್‌ನಿಂದ ಹಣವನ್ನು ಪಡೆದುಕೊಂಡು ಹೋಗುವಾಗ ಬಿದ್ದುಹೋಗಿತ್ತು. ಅದೇ ದಾರಿಯಲ್ಲಿ ಸಾಗುತ್ತಿದ್ದ ಚೆಮ್ನಾಡು ಅರಮಂಗಾನದ ಶಂಕರನ್ ಮತ್ತು ರೂಪೇಶ್ ಕೈಂದಾರ್ ಅವರಿಗೆ ಅದು ಲಭಿಸಿದ್ದು, ಕೂಡಲೇ ಕಾಸರಗೋಡು ನಗರ ಠಾಣೆಯ ಪೊಲೀಸರಿಗೆ ಹಸ್ತಾಂತರಿಸಿದರು.
ಈ ಮಧ್ಯೆ ಹಣ ಕಳೆದು ಹೋಗಿರುವ ಬಗ್ಗೆ ಸೊಸೈಟಿಯ ಕಾರ್ಯದರ್ಶಿ ಪೊಲೀಸರಿಗೆ ದೂರು ನೀಡಿದ್ದರು. ಅಷ್ಟರಲ್ಲಿ ಯುವಕರ ಮೂಲಕ ಹಣ ಕೈಸೇರಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಹಣವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಯುವಕರ ಮಾದರಿ ಕಾರ್ಯವನ್ನು ಪೊಲೀಸರು, ಸೊಸೈಟಿಯ ಅ ಧಿಕಾರಿಗಳು ಅಭಿನಂದಿಸಿದ್ದಾರೆ.