Advertisement

ಕಾಸರಗೋಡು: ಒಂದು ಕಿಲೋ ಚಿನ್ನ ಸಹಿತ ಇಬ್ಬರ ಬಂಧನ

05:05 PM Nov 28, 2022 | Team Udayavani |

ಕಾಸರಗೋಡು: ವಾಹನ ತಪಾಸಣೆ ಸಂದರ್ಭದಲ್ಲಿ ಕಾರನ್ನು ತಪಾಸಣೆ ನಡೆಸಿದಾಗ ಒಂದು ಕಿಲೋ ಚಿನ್ನ ಪತ್ತೆಯಾಗಿದ್ದು, ಈ ಸಂಬಂಧ ಕಾಸರಗೋಡು ಆಯಿಷಾ ಮಂಜಿಲ್‌ನ ವಸೀಮುದ್ದೀನ್‌(32) ಮತ್ತು ಕೆರಿಂಬನೈಕಲ್‌ ವೀಟಿಲ್‌ನ ಮೊಹಮ್ಮದ್‌ ಸಾಲಿ(49)ಯನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ರಾಷ್ಟ್ರೀಯ ಹೆದ್ದಾರಿಯ ತಾಳೆಕ್ಕೋಡುನಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದಾಗ ಚಿನ್ನ ಪತ್ತೆಯಾಯಿತು.

ಯುವಕನ ಅಪಹರಣ
ಕಾಸರಗೋಡು: ಪುದಿಯಕೋಟದಿಂದ ಯುವಕನನ್ನು ಕಾರಿನಲ್ಲಿ ಅಪಹರಿಸಿ 17 ಸಾವಿರ ರೂ. ಹಾಗು ಸ್ಕೂಟರ್‌ ಕೀಲಿ ಗೊಂಚಲು ಎಗರಿಸಿದ ಬಗ್ಗೆ ಹೊಸದುರ್ಗ ಪೊಲೀಸರಿಗೆ ದೂರು ನೀಡಲಾಗಿದೆ.

ಹೊಸದುರ್ಗ ಪೂಂಜಾವಿ ಕಡಪ್ಪುರದ ಅಬೂಬಕ್ಕರ್‌ ಸಿದ್ದಿಕ್‌(45) ನೀಡಿದ ದೂರಿನಂತೆ ಅಶ್ರಫ್‌, ಹಾಶಿಂ ಪಾಣತ್ತೂರು, ಅನ್ವರ್‌ ಆವಿಕೆರೆ ಹಾಗು ಇತರ ಇಬ್ಬರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.

ಮನೆ ಮೇಲಿನಿಂದ ಬಿದ್ದು ಗಾಯಗೊಂಡ ಮಹಿಳೆಯ ಸಾವು
ಕಾಸರಗೋಡು: ಮನೆ ಮೇಲಿನ ನೀರಿನ ಟ್ಯಾಂಕ್‌ ಶುಚೀಕರಿಸಲೆಂದು ಮೇಲೇರುತ್ತಿದ್ದಾಗ ಆಯ ತಪ್ಪಿ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಹೊಸದುರ್ಗ ನಾರ್ತ್‌ ಚಿತ್ತಾರಿಯ ಸತ್ತಾರ್‌ ಅವರ ಪತ್ನಿ ಸಮೀರಾ(40) ಸಾವಿಗೀಡಾದರು. ನ.25 ರಂದು ನೀರಿನ ಟ್ಯಾಂಕ್‌ ಶುಚೀಕರಿಸಲೆಂದು ಮೇಲೇರುತ್ತಿದ್ದಾಗ ಬಿದ್ದು ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಫ‌ಲಕಾರಿಯಾಗಿಲ್ಲ.

Advertisement

ಬಾಲಕನಿಗೆ ಲೈಂಗಿಕ ಕಿರುಕುಳ : ಬಂಧನ
ಕಾಸರಗೋಡು: ಬಾಲಕನಿಗೆ ಸಲಿಂಗರತಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧೂರು ಪಂಚಾಯತ್‌ ಕುಂಜಾರ್‌ನ ಮುಹಮ್ಮದ್‌ನನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.

ಈತನ ವಿರುದ್ಧ ಪೋಕ್ಸೊ ಕೇಸು ದಾಖಲಿಸಿದ್ದಾರೆ. ನ.26 ರಂದು ಬಾಲಕನಿಗೆ ಮದ್ಯ ಕುಡಿಸಿ ಕಿರುಕುಳ ನೀಡಿದ್ದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು.

ಎಂಡಿಎಂಎ ಸಹಿತ ಮೂವರ ಬಂಧನ
ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ 2.68 ಗ್ರಾಂ ಎಂಡಿಎಂಎ ಸಹಿತ ಮೂವರನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಅಜಾನೂರು ಇಟ್ಟಮ್ಮಲ್‌ ನಸ್ರತ್‌ ಕ್ವಾರ್ಟರ್ಸ್‌ನ ಪಿ.ಎ.ಮನ್ಸೂರು(22), ಸಿ.ಮುಹಮ್ಮದ್‌ ಆದಿಲ್‌(27) ಮತ್ತು ಕೊಳವಯಲ್‌ ಮುಹಮ್ಮದ್‌ ನೌಫಲ್‌(31)ನನ್ನು ಬಂಧಿಸಲಾಯಿತು. ಇಕ್ಬಾಲ್‌ ಹೈಯರ್‌ ಸೆಕೆಂಡರಿ ಶಾಲಾ ಜಂಕ್ಷನ್‌ ಪರಿಸರದಿಂದ ಎಂಡಿಎಂಎ ವಶಪಡಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next