ಕಾಸರಗೋಡು: ಮನೆಗೆ ಬೆಂಕಿ ಹತ್ತಿಕೊಂಡಾಗ ತೊಟ್ಟಿಲಿನಲ್ಲಿ ನಿದ್ರಿಸುತ್ತಿದ್ದ ಆರು ತಿಂಗಳ ಮಗು ಅದೃಷ್ಟವಶಾತ್ ಪಾರಾದ ಘಟನೆ ಕಾನತ್ತೂರಿನ ಪಯರ್‌ಪಳ್ಳ ಜಂಕ್ಷನ್‌ನಲ್ಲಿ ನಡೆದಿದೆ.
ಕೆ. ರಾಮಚಂದ್ರನ್ ಅವರ ಮನೆಗೆ ಬೆಂಕಿ ಹತ್ತಿಕೊಂಡಿತ್ತು. ಮನೆಯ ಒಂದನೇ ಮಹಡಿಯಲ್ಲಿ ರಾಮಚಂದ್ರ, ಪತ್ನಿ ಸಾರಿಕಾ, ಪುತ್ರ ರಾಹುಲ್ ಮತ್ತು ಆರು ತಿಂಗಳ ಮಗು ಮಲಗಿದ್ದರು. ರಾತ್ರಿ ಮಗು ಜೋರಾಗಿ ಅಳ ತೊಡಗಿತು. ಆಗ ಮನೆಯವರು ಎಚ್ಚೆತ್ತು ತೊಟ್ಟಿಲಿನಲ್ಲಿದ್ದ ಮಗುವನ್ನು ಎತ್ತಿಕೊಂಡು ಹೊರಕ್ಕೆ ಬಂದರು. ಅದಾದ ಕೆಲವೇ ನಿಮಿಷಗಳಲ್ಲಿ ಕೊಠಡಿಗೆ ಬೆಂಕಿ ಹತ್ತಿಕೊಂಡಿತು.
ಕೊಠಡಿಯಲ್ಲಿದ್ದ ಎ.ಸಿ., ಕಪಾಟು, ಸೋಫ, ಮಂಚ ಮೊದಲಾದ ಗೃಹೋಪಕರಣಗಳು ಬೆಂಕಿಗಾಹುತಿಯಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಬೆಂಕಿ ಹತ್ತಿಕೊಳ್ಳಲು ಕಾರಣವೆಂದು ಶಂಕಿಸಲಾಗಿದೆ.