ಕಾಸರಗೋಡು: ಮನೆಯೊಳಗೆ ತಾಯಿ ಮತ್ತು ಮಗಳು ನಿಗೂಢ ರೀತಿಯಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.
ಬೇಡಡ್ಕ ಕುಂಡಂಗುಳಿ ನೀರ್ಕಯದ ಚಂದ್ರನ್ ಅವರ ಪತ್ನಿ ನಾರಾಯಣಿ(45) ಮತ್ತು ಪುತ್ರಿ ಶ್ರೀನಂದ (12)ಸಾವಿಗೀಡಾಗಿದ್ದಾರೆ.
ನಾರಾಯಣಿ ಅಡುಗೆ ಕೊಠಡಿಯ ಪಕ್ಕದ ಶೆಡ್‌ನೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪುತ್ರಿ ಶ್ರೀನಂದ ಮನೆಯೊಳಗೆ ಕೊಠಡಿಯಲ್ಲಿ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ನೆರೆಮನೆಯವರು ಜ.22 ರಂದು ಬೆಳಗ್ಗೆ ನಾರಾಯಣಿಗೆ ಫೋನ್ ಮಾಡಿದ್ದರು. ಆದರೆ ಫೋನ್ ಕಾಲ್ ಸ್ವೀಕರಿಸಿರಲಿಲ್ಲ. ಸಂಜೆಯಾದರೂ ಯಾರೂ ಮನೆಯಿಂದ ಹೊರ ಬರದೇ ಇದ್ದುದರಿಂದ ಸಂಶಯಗೊಂಡ ನೆರೆಮನೆಯವರು ಆ ಮನೆಗೆ ಬಂದು ನೋಡಿದಾಗ ತಾಯಿ ಮತ್ತು ಪುತ್ರಿ ಸಾವಿಗೀಡಾದ ಸ್ಥಿತಿಯಲ್ಲಿ ಕಂಡು ಬಂದರು. ವಿಷಯ ತಿಳಿದು ಬೇಡಗಂ ಪೊಲೀಸರು ಸ್ಥಳಕ್ಕೆ ಧಾವಿಸಿ ಮಹಜರು ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
Related Articles
ಬೀಡಿ ಕಾರ್ಮಿಕೆಯಾಗಿರುವ ನಾರಾಯಣಿ ಕೀಯೂರಿನ ದಿ|ರಾಮನ್-ವೆಳ್ಳಚ್ಚಿ ದಂಪತಿ ಪುತ್ರಿ. ಇವರು ಸಹೋದರರಾದ ರಾಘವನ್, ಬಾಲಕೃಷ್ಣನ್ ಹಾಗು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಶ್ರೀನಂದ ಕುಂಡಂಗುಳಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ 7 ನೇ ತರಗತಿ ವಿದ್ಯಾರ್ಥಿನಿ. ಆಕೆಯ ತಂದೆ ಚಂದ್ರನ್ ಟೂರಿಸ್ಟ್ ಬಸ್ಸಿನ ಚಾಲಕರಾಗಿದ್ದಾರೆ. ಅವರು ದಿನಗಳ ಹಿಂದೆ ಪ್ರವಾಸಿಗರನ್ನು ಹೇರಿಕೊಂಡು ಊಟಿಗೆ ಹೋಗಿದ್ದರು.
ಸಾವಿನ ಕಾರಣದ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಲಭಿಸಿದ ಬಳಿಕವಷ್ಟೇ ಸಾವಿನ ಕಾರಣ ತಿಳಿದುಕೊಳ್ಳಲು ಸಾಧ್ಯ ಎಂದು ಪೊಲೀಸರು ತಿಳಿಸಿದ್ದಾರೆ.