ಕಾಸರಗೋಡು: ಅಡೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ರೌಢ ಶಾಲಾ ಕನ್ನಡ ವಿಭಾಗದ ಸಮಾಜ ವಿಜ್ಞಾನ ವಿಷಯಕ್ಕೆ ಮಲಯಾಳ ಶಿಕ್ಷಕಿಯನ್ನು ನೇಮಿಸಿರುವ ಹಿನ್ನೆಲೆಯಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
Advertisement
ಮೊದಲೊಮ್ಮೆ ಬಂದಿದ್ದ ಶಿಕ್ಷಕಿ ಯನ್ನು ಜನ ವಿರೋಧಿಸಿದ್ದರಿಂದ ಇಂದು ಅವರು ಪೊಲೀಸರೊಂದಿಗೆ ಬಂದಾಗ ಪರಿಸ್ಥಿತಿ ಹದಗೆಟ್ಟಿತು. ಕನ್ನಡ ವಿದ್ಯಾರ್ಥಿಗಳು ಊಟವನ್ನೂ ಮಾಡದೆ ಪ್ರತಿಭಟನೆ ನಡೆಸಿದರು. ಆಗ ತಮ್ಮ ಕಚೇರಿಗೆ ಆಗಮಿಸಿದ ಮುಖ್ಯ ಶಿಕ್ಷಕರು ಘಟನಾವಳಿಗಳನ್ನು ತಿಳಿದ ಕೂಡಲೇ ಅಸ್ವಸ್ಥರಾಗಿ ಕುಸಿದಿದ್ದು, ಆಸ್ಪತ್ರೆಗೆ ದಾಖಲಿಸಲಾಯಿತು. ಸೋಮವಾರ ಹೋರಾಟ ಮುಂದುವರಿಸುವುದಾಗಿ ಕನ್ನಡ ವಿದ್ಯಾರ್ಥಿಗಳು ಘೋಷಿಸಿದ್ದಾರೆ.