ಕಾಸರಗೋಡು: ಚೆಮ್ನಾಡ್ ಸಮೀಪದ ಕೋಟ್ಟರುವ ಕೆನತ್ತಿಂಗರೆಯಲ್ಲಿ ಲಾರಿ – ಬೈಕ್ ಢಿಕ್ಕಿ ಹೊಡೆದು ಪರವನಡ್ಕ ತಲಕ್ಲಾಯಿ ಶ್ರೀ ಅಯ್ಯಪ್ಪ ಭಜನ ಮಂದಿರ ಬಳಿಯ ನಡುವಿಲ್ ವೀಟಿಲ್‌ನ ಎಂ.ಕುಂಞಂಬು ನಾಯರ್ (58) ಸಾವಿಗೀಡಾದರು.
Advertisement
ಮೂವತ್ತು ವರ್ಷಗಳ ಕಾಲ ಕೊಲ್ಲಿಯಲ್ಲಿ ದುಡಿದಿದ್ದ ಕುಂಞಂಬು ನಾಯರ್ ಮೂರು ವರ್ಷಗಳ ಹಿಂದೆ ಊರಿಗೆ ಮರಳಿದ್ದರು.
ಮೃತರು ಪತ್ನಿ ಓಮನಾ, ಮಕ್ಕಳಾದ ಡಾ| ಕೀರ್ತಿಶಾ, ತೇಜಸ್ ಅವರನ್ನು ಅಗಲಿದ್ದಾರೆ. ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.