ಕಾಸರಗೋಡು: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ನಿರುದ್ಯೋಗಿಗಳು ಹಾಗು ಶ್ರೀಮಂತರನ್ನು ವಂಚಿಸಿದ ಪ್ರಕರಣದ ಆರೋಪಿ ಮುಟ್ಟತ್ತೋಡಿ ನಿವಾಸಿಯಾದ ಶ್ರೀನಾಥ್‌ನನ್ನು ಅಡ್ಕತ್ತಬೈಲ್‌ನಿಂದ ವಿದ್ಯಾನಗರ ಪೊಲೀಸರ ನೆರವಿನೊಂದಿಗೆ ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ.
Advertisement
ಪುತ್ತೂರು, ಕಡಬ, ಸುಳ್ಯ, ಮಡಿಕೇರಿ ಮೊದಲಾದ ಸ್ಥಳಗಳಲ್ಲಿ ಸುಮಾರು 40 ರಷ್ಟು ಜನರನ್ನು ವಂಚಿಸಿ ಕೋಟ್ಯಾಂತರ ರೂ. ಲಪಟಾಯಿಸಿದಾಗಿ ಮಡಿಕೇರಿ ಪೊಲೀಸರು ಕೇಸು ದಾಖಲಿಸಿದ್ದರು. ಪ್ರತಿಯೊಬ್ಬರಿಂದ 4 ಲಕ್ಷ ರೂ. ಪಡೆದಿರುವುದಾಗಿ ಮಡಿಕೇರಿ ನಿವಾಸಿಯೋರ್ವರು ನೀಡಿದ ದೂರಿನಂತೆ ಬಂಧಿಸಲಾಗಿದೆ.