ಕಾಸರಗೋಡು: ಕಲ್ಲಿಕೋಟೆ ಕರಿಪೂರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 1.2 ಕೋಟಿ ರೂ. ಮೌಲ್ಯದ ಚಿನ್ನ ಹಾಗೂ ವಿದೇಶಿ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಂಡ ಕಸ್ಟಮ್ಸ್ ದಳ ಈ ಸಂಬಂಧ ಕಾಸರಗೋಡಿನ ಇಬ್ಬರು ಸಹಿತ ನಾಲ್ವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದೆ.
ಕಾಸರಗೋಡು ನಿವಾಸಿಗಳಾದ ಅಬ್ದುಲ್ ಸಲಾಂ(33), ಅಬ್ದುಲ್ ಶರೀಫ್(48), ಮಲಪ್ಪುರ ವೆಂಙರ ವಳಪ್ಪಿಲ್ ರಫೀಕ್(33) ಮತ್ತು ಕರೆನ್ಸಿ ನೋಟು ಸಾಗಿಸಿದ ಕಲ್ಲಿಕೋಟೆ ನಿವಾಸಿ ಶಬೀರಲಿ(38) ಯನ್ನು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದೆ.
ಶಾರ್ಜಾದಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಬಂದಿಳಿದಿದ್ದ ಅಬ್ದುಲ್ ಸಲಾಂ ನಿಂದ 374 ಗ್ರಾಂ ಚಿನ್ನ ವಶಪಡಿಸಿದೆ. ಹದ್ದಾದ್‌ನಿಂದ ಬಂದಿದ್ದ ಅಬ್ದುಲ್ ಶರೀಫ್‌ನಿಂದ 1059 ಗ್ರಾಂ ಚಿನ್ನ ಹಾಗೂ ರಿಯಾದ್‌ನಿಂದ ಬಂದಿಳಿದ ರಫೀಕ್‌ನಿಂದ 2502 ಗ್ರಾಂ ಚಿನ್ನವನ್ನು ವಶಪಡಿಸಲಾಗಿದೆ.
ಕೊಲ್ಲಿಗೆ ಸಾಗಿಸಲು ಯತ್ನಿಸಿದ ವಿದೇಶಿ ಕರೆನ್ಸಿಯನ್ನು ಶಬೀರಲಿಯಿಂದ ವಶಪಡಿಸಲಾಗಿದೆ.