ಕಾಸರಗೋಡು: ಕಾಸರಗೋಡು ಸಹಿತ ವಿವಿಧ ಜಿಲ್ಲೆಗಳಿಗೆ ಗಾಂಜಾ, ಎಂಡಿಎಂಎ ಸಹಿತ ಮಾದಕ ವಸ್ತುಗಳನ್ನು ಸಾಗಿಸುವ ಮಾಫಿಯಾ ತಂಡದ ಸೂತ್ರಧಾರನೂ, ತೆಲಂಗಾಣದಿಂದ ಪೊಲೀಸರು ಬಂಧಿಸಿದ ದೇಲಂಪಾಡಿ ವಾಲ್ತಾಜೆ ನಿವಾಸಿ ಇಬ್ರಾಹಿಂ (42)ನನ್ನು ಕಣ್ಣೂರಿಗೆ ತಲುಪಿಸಿ ತೀವ್ರ ತನಿಖೆಗೊಳಪಡಿಸಲಾಗಿದೆ.
ಇಬ್ರಾಹಿಂನನ್ನು ತೆಲಂಗಾಣದ ಖಮ್ಮಂ ಜಿಲ್ಲೆಯಿಂದ ಒಂದು ವಾರದ ಹಿಂದೆ ಬಂಧಿಸಿದ್ದರು. ಈತ ತೆಲಂಗಾಣದಲ್ಲಿ ಭೂಮಿ ಗೇಣಿಗೆ ಪಡೆದು ಅದರಲ್ಲಿ ಗಾಂಜಾ ಕೃಷಿ ನಡೆಸುತ್ತಿದ್ದಾನೆಂದು ತನಿಖೆಯಲ್ಲಿ ತಿಳಿದು ಬಂದಿದೆ. ಗಾಂಜಾ ಬೆಳೆಸುತ್ತಿದ್ದ ಸ್ಥಳ ಮಾವೋವಾದಿಗಳಿಗೆ ಸ್ವಾಧೀನವುಳ್ಳದ್ದಾಗಿದೆ. ಆದ್ದರಿಂದ ಗಾಂಜಾ ಕೃಷಿಗೆ ಇದು ಸೂಕ್ತ ಪ್ರದೇಶವೆಂದು ಖಚಿತಪಡಿಸಿದ ಇಬ್ರಾಹಿಂ ಅಲ್ಲಿ ಗಾಂಜಾ ಬೆಳೆಸಿ ಅದಕ್ಕೆ ಮಾವೋವಾದಿಗಳನ್ನೇ ಕಾವಲು ನಿಲ್ಲಿಸಿದ್ದನೆನ್ನಲಾಗಿದೆ. ಅಲ್ಲಿ ಬೆಳೆದ ಗಾಂಜಾವನ್ನು ಕಾಸರಗೋಡು ಸಹಿತ ವಿವಿಧೆಡೆಗೆ ವಾಹನಗಳ ಮೂಲಕ ಸಾಗಿಸುತ್ತಿದ್ದನು.