ಕಾಸರಗೋಡು: ಪೆರಿಯ ಪರಿಸರದಲ್ಲಿ ಬಸ್ ಮತ್ತು ಕಾರು ಢಿಕ್ಕಿ ಹೊಡೆದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪೆರಿಯದ ಕೊರಪ್ಪು ಕಟ್ಟೆ ಸಂಸ್ಥೆಯ ಮಾಲಕ ಪೆರಿಯ ನಿಡುವೋಟ್ಟು ಪಾರದ ವೈಶಾಖ್ (22) ಸಾವಿಗೀಡಾದರು.
Advertisement
ಕಾರಿನಲ್ಲಿದ್ದ ಕಾಸರಗೋಡು ಸರಕಾರಿ ಕಾಲೇಜಿನ ಪದವಿ ವಿದ್ಯಾರ್ಥಿನಿ ಪುಲ್ಲೂರು ತಡದ ಆರತಿ (22) ಗಂಭೀರ ಗಾಯಗೊಂಡಿದ್ದು, ಅವರನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಬಸ್ ಪ್ರಯಾಣಿಕರಾದ ಮುತ್ತನಡ್ಕದ ಐಶ್ವರ್ಯಾ (19), ಪೆರಿಯದ ವಿಜಿನಾ (25), ತನ್ನೋಟ್‌ನ ಶ್ರೀವಿದ್ಯಾ (37), ಮನಾಂಕಡವಿನ ಪುಳಿಕ್ಕಾಲು ಕೆ.ಟಿ.ಕುಂಞಿಕಣ್ಣನ್ (60), ತುಂಬಿಕುನ್ನಿನ ಮಾಧವಿ (60) ಹಾಗೂ ಜಿತಿನ್ (25) ಸಹಿತ ಹಲವರು ಗಾಯಗೊಂಡಿದ್ದಾರೆ.