Advertisement
ಕಾಡಾನೆ ಹಿಂಡು ದಾಳಿ: ಸ್ಕೂಟರ್, ಕೃಷಿಗೆ ಹಾನಿಕಾಸರಗೋಡು: ಬಳಾಲ್ ಗ್ರಾಮ ಪಂಚಾಯತ್‌ನ ಮಾಲೋಂ ವಲಿಯಪುಂಜಿಯಲ್ಲಿ ಶನಿವಾರ ರಾತ್ರಿ ಕಾಡಾನೆ ಹಿಂಡು ದ್ವಿಚಕ್ರ ವಾಹನವನ್ನು ಎಳೆದಾಡಿದ್ದು, ಅಪಾರ ಕೃಷಿಗೆ ಹಾನಿ ಮಾಡಿದೆ.
Related Articles
ಕುಂಬಳೆ: ಬಸ್ ಚಾಲಕರಾಗಿದ್ದ ಪೆರ್ಲ ಬಜಕೂಡ್ಲು ನಿವಾಸಿ ಗಿರಿಧರ ಪೂಜಾರಿ (56) ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Advertisement
ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಅಯ್ಯಪ್ಪ ಮಂದಿರದ ಬಳಿ ವಿಷ ಸೇವಿಸಿ ಅಸ್ವಸ್ಥ ಸ್ಥಿತಿಯಲ್ಲಿ ಕಂಡು ಬಂದ ಅವರನ್ನು ತತ್‌ಕ್ಷಣ ಸ್ಥಳೀಯರು ಕಾಸರಗೋಡು ಖಾಸಗಿ ಆಸ್ಪತ್ರೆಗೆ ಕೊಂಡೊಯ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದರೂ ರಕ್ಷಿಸಲು ಸಾಧ್ಯವಾಗಲಿಲ್ಲ.
ಅಯ್ಯಪ್ಪ ಭಕ್ತರಾಗಿದ್ದ ಇವರು ಹಲವಾರು ವರ್ಷಗಳಿಂದ ಶಬರಿಮಲೆ ಯಾತ್ರೆಗೈಯುತ್ತಿದ್ದು, ಗುರು ಸ್ವಾಮಿಗಳಾಗಿ ಹಲವಾರು ಅಯ್ಯಪ್ಪ ಭಕ್ತರನ್ನು ವರ್ಷಂಪ್ರತಿ ಶಬರಿಮಲೆಗೆ ಕರೆದೊಯ್ಯುತ್ತಿದ್ದರು. ಪೆರ್ಲ ಅಯ್ಯಪ್ಪ ಮಂದಿರದ ಗುರುಸ್ವಾಮಿಯಾಗಿಯೂ, ವಿಶ್ವಹಿಂದೂ ಪರಿಷತ್ ಸಮಿತಿ ಪದಾಧಿಕಾರಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು.