Advertisement
ಮೋಟಾರ್ ಬಳಸಿ ಗದ್ದೆ ಕೃಷಿ
Related Articles
Advertisement
ಎಷ್ಟೇ ನೀರು ಹಾಯಿಸಿದರೂ ಮಣ್ಣು ಹೀರಿಕೊಳ್ಳುವ ಕಾರಣ ಹೆಚ್ಚು ಹೆಚ್ಚು ನೀರು ಹಾಯಿಸಬೇಕಾದ ಅಗತ್ಯವಿದೆ. ಇದು ಹೆಚ್ಚು ಖರ್ಚಿಗೂ ದಾರಿಯಾಗುತ್ತಿದ್ದು ಈ ಬಾರಿ ಬೆಳೆಯಲ್ಲಿ ಉಂಟಾಗಬಹುದಾದ ಕುಸಿತದ ಭಯವಿರುವ ಕೃಷಿಕರಿಗೆ ಇದೊಂದು ಸವಾಲಾಗಿ ಪರಿಣಮಿಸಿದೆ.
ಅಕ್ಕಿ ಬೆಲೆ ಹೆಚ್ಚಬಹುದೇ?
ಈಗಾಗಲೇ ಅಕ್ಕಿ ಬೆಲೆ ಗಗನಕ್ಕೇರಿದೆ. ಈ ಬಾರಿಯ ಮಳೆ-ಬೆಳೆ ಸಮಸ್ಯೆ ಮುಂದಿನ ದಿನಗಳಲ್ಲಿ ಬಡವರ ಅನ್ನಕ್ಕೆ ಕಲ್ಲು ಹಾಕಲಿದೆಯೇ ಎಂಬ ಸಂದೇಹ ಮೂಡುತ್ತದೆ,
ಮಳೆ ಬಂದರೆ ಭತ್ತ ಬೆಳೆ
ಜಿಲ್ಲೆಯ ಇನ್ನು ಕೆಲವು ಭಾಗಗಳಲ್ಲಿ ಭತ್ತದ ಕೃಷಿ ಇನ್ನೂ ಆರಂಭವಾಗಿಲ್ಲ. ಉತ್ತಮ ಮಳೆ ಬಂದ ಅನಂತರವೇ ನೇಜಿ ಹಾಕುವ, ಬಿತ್ತನೆ ಮಾಡುವ ಕೆಲಸ ಆರಂಭಿಸುವುದಾಗಿ ನಿರ್ಧರಿಸಿರುವ ರೈತರು ಮಳೆಗಾಗಿ ಕಾಯುತ್ತಿದ್ದಾರೆ. ಕಾಲದೊಂದಿಗೆ ಬದಲಾಗುವ ಮಳೆ ಬೆಳೆ ಜನಸಾಮಾನ್ಯನ ನಿತ್ಯ ಬದುಕಿನ ಮೇಲೆ ಬೀರುವ ಪರಿಣಾಮ ಅಷ್ಟಿಷ್ಟಲ್ಲ.
ಜಿಲ್ಲೆಯಲ್ಲಿ ಅತೀ ಕಡಿಮೆ ಮಳೆ
ಕಾಸರಗೋಡು ಜಿಲ್ಲೆಯಲ್ಲಿ ಅತೀ ಕಡಿಮೆ ಮಳೆಯಾಗಿರುವುದು ಇಲ್ಲಿನ ಕೃಷಿಕರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಜೂನ್ ತಿಂಗಳಲ್ಲಿ ಕಡಿಮೆಯಾದರೂ ಮುಂದೆ ಹೆಚ್ಚು ಮಳೆ ಸುರಿಯಬಹುದೆಂಬ ಊಹೆಯಿಂದ ಹಲವೆಡೆಗಳಲ್ಲಿ ಕೃಷಿಕರು ಭತ್ತದ ಕೃಷಿ ಆರಂಭಿಸಿದ್ದಾರೆ. ಆದರೆ ಜುಲೈ ಮಾಸ ಪ್ರಾರಂಭವಾದರೂ ಮಳೆ ಬಿರುಸುಗೊಳ್ಳದಿರುವುದು ವ್ಯಾಪಕ ಆತಂಕಕ್ಕೆ ಕಾರಣವಾಗಿದೆ. ಸೌಲಭ್ಯ ಇರುವ ಕಡೆಗಳಲ್ಲಿ ಮೋಟಾರು ಮೂಲಕ ನೀರು ಹಾಯಿಸಿ ಗದ್ದೆ ಕೆಲಸ ಮಾಡಲಾಗುತ್ತಿದೆ. ಬೀಜ ಬಿತ್ತಿ 20-25ದಿನಗಳೊಳಗೆ ನೇಜಿ ತೆಗೆದು ಗದ್ದೆ ಉತ್ತು ಮತ್ತೆ ನಾಟಿ ಮಾಡಬೇಕು. ಇಲ್ಲವಾದಲ್ಲಿ ಫಸಲು ಕಡಿಮೆಯಾಗುತ್ತದೆ. ಆದರೆ ಈ ವರ್ಷ ನೇಜಿ ನೆಡಲು ಅಗತ್ಯವಾದ ಮಳೆ ಸುರಿಯದಿರುವುದು ಕೃಷಿಕರನ್ನು ಸಂಕಷ್ಟಕ್ಕೀಡು ಮಾಡಿದೆ.
ಲಾಭಕ್ಕಿಂತ ನಷ್ಟವೇ ಹೆಚ್ಚು
ಕಾರ್ಮಿಕರ ಕೊರತೆ, ಸರಕಾರದಿಂದ ಸೂಕ್ತ ಸೌಲಭ್ಯಗಳು ದೊರೆಯದಿರುವುದು, ಹೆಚ್ಚಾಗುತ್ತಿರುವ ಖರ್ಚು ಈಗಾಗಲೇ ಕೃಷಿಕರನ್ನು ಭತ್ತದ ಕೃಷಿಯಿಂದ ಹಿಂಜರಿಯುವಂತೆ ಮಾಡಿದೆ. ಕೆಲವೆಡೆಗಳಲ್ಲಿ ಭತ್ತದ ಗದ್ದೆಯಲ್ಲಿ ತೆಂಗು, ಕಂಗು ಬೆಳೆದಿರುವುದು ಕಾಣಬಹುದು.
– ಅಖೀಲೇಶ್ ನಗುಮುಗಂ