Advertisement

Kasaragod: ಮನನೊಂದು ವೀಡಿಯೋ ಪೋಸ್ಟ್‌ ಮಾಡಿ ಆತ್ಮಹ*ತ್ಯೆಗೆ ಶರಣಾದ ಚಾಲಕ

09:27 PM Oct 08, 2024 | Team Udayavani |

ಕಾಸರಗೋಡು: ಪೊಲೀಸರು ವಶಕ್ಕೆ ತೆಗೆದುಕೊಂಡ ಆಟೋ ರಿಕ್ಷಾವನ್ನು ಐದು ದಿನಗಳೂ ಕಳೆದರೂ ಬಿಟ್ಟುಕೊಡದಿದ್ದುದರಿಂದ ಮನನೊಂದು ರಿಕ್ಷಾ ಚಾಲಕ ಮೂಲತ; ಕರ್ನಾಟಕ ನಿವಾಸಿ, ಕಾಸರಗೋಡು ರೈಲು ನಿಲ್ದಾಣ ರಸ್ತೆ ಬಳಿಯ ಶೌಕತ್ತ್ ಕ್ವಾರ್ಟ್‌ರ್ಸ್‌ನಲ್ಲಿ ವಾಸಿಸುತ್ತಿದ್ದ ಕೆ.ಅಬ್ದುಲ್‌ ಸತ್ತಾರ್‌(60) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಕುರಿತು ಜಿಲ್ಲಾ ಕ್ರೈಂಬ್ರಾಂಚ್‌ನಿಂದ ತನಿಖೆ ನಡೆಸಲು ಪೊಲೀಸ್‌ ಇಲಾಖೆ ತೀರ್ಮಾನಿಸಿದೆ.

Advertisement

ಇದೇ ಸಂದರ್ಭದಲ್ಲಿ ಆಟೋ ರಿಕ್ಷಾವನ್ನು ವಶಕ್ಕೆ ತೆಗೆದುಕೊಂಡ ವಿಷಯದಲ್ಲಿ ಪೊಲೀಸರ ವತಿಯಿಂದ ತಪ್ಪುಗಳು ಉಂಟಾಗಿದೆಯೇ ಎಂಬುದರ ಬಗ್ಗೆ ತನಿಖೆ ನಡೆಸುವ ಹೊಣೆಗಾರಿಕೆಯನ್ನು ಜಿಲ್ಲಾ ಹೆಚ್ಚುವರಿ ಎಸ್‌ಪಿ ಬಿ.ಬಾಲಕೃಷ್ಣನ್‌ ನಾಯರ್‌ ಅವರಿಗೆ ಇಲಾಖೆ ವಹಿಸಿಕೊಟ್ಟಿದೆ.

ಎಸ್‌.ಐ. ವರ್ಗಾವಣೆ : ಆಟೋ ರಿಕ್ಷಾ ಚಾಲಕ ಅಬ್ದುಲ್‌ ಸತ್ತಾರ್‌ ಆತ್ಮಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಪೊಲೀಸ್‌ ಠಾಣೆಯ ಎಸ್‌.ಐ ಪಿ.ಅನೂಬ್‌ರನ್ನು ಚಂದೇರ ಪೊಲೀಸ್‌ ಠಾಣೆಗೆ ವರ್ಗಾಯಿಸಲಾಗಿದೆ.

ಆತ್ಮಹತ್ಯೆಗೆ ಮುನ್ನ ವಶಪಡಿಸಿಕೊಂಡ ಆಟೋ ರಿಕ್ಷಾವನ್ನು ಬಿಟ್ಟುಕೊಡದಿರುವುದರಿಂದ ನಾನು ಆತ್ಮಹತ್ಯೆಗೈಯಲು ತೀರ್ಮಾನಿಸಿದ್ದಾಗಿ ಫೇಸ್‌ಬುಕ್‌ನಲ್ಲಿ ಮಾಡಲಾದ ಪೋಸ್ಟ್‌ನಲ್ಲಿ ಅಬ್ದುಲ್‌ ಸತ್ತಾರ್‌ ತಿಳಿಸಿದ್ದರು. ಈ ವೀಡಿಯೋ ವೀಕ್ಷಿಸಿದವರು ತತ್‌ಕ್ಷಣ ಕ್ವಾರ್ಟರ್ಸ್‌ಗೆ ಬಂದು ನೋಡಿದಾಗ ಅಬ್ದುಲ್‌ ಸತ್ತಾರ್‌ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಪೊಲೀಸ್‌ ಕ್ರಮವನ್ನು ಆಟೋ ರಿಕ್ಷಾ ಚಾಲಕರು ಪ್ರತಿಭಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next