Advertisement

ಕಾರವಾರ: ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೆಂಕಿ; ಜೆಸಿಬಿ,ಟಿಪ್ಪರ್ ಬೆಂಕಿಗಾಹುತಿ

08:47 PM May 11, 2023 | Team Udayavani |

ಕಾರವಾರ: ನಗರದ ಹೊರವಲಯವಾದ ಶಿರವಾಡ ಪ್ರದೇಶದಲ್ಲಿದ್ದ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೆಳಗಿನ ಜಾವ ಬೆಂಕಿ ಹೊತ್ತಿಕೊಂಡ ಕಾರಣ ಅಪಾರ ನಷ್ಟ ಸಂಭವಿಸಿದೆ.

Advertisement

ನಿನ್ನೆ ರಾತ್ರಿ ಮಳೆ ಬಂದು ವಿದ್ಯುತ್ ಕೈಕೊಟ್ಟಿತ್ತು. ನಂತರ ಭಾರಿ ಗಾಳಿ ಸಹ ಬೀಸಿತ್ತು. ಗುಡುಗು ಸಿಡಲಿನ‌ ಆರ್ಭಟಕ್ಕೆ ತ್ಯಾಜ್ಯ ಘಟಕದಲ್ಲಿ ಶಾರ್ಟ ಸರ್ಕ್ಯೂಟ್ ಆಗಿದೆ ಎಂದು ಅಂದಾಜಿಸಲಾಗಿದೆ. ಆಗ್ನಿ ಅನಾಹುತ ದಿಂದ ಕಾರವಾರ ನಗರಸಭೆಯ ತ್ಯಾಜ್ಯ ಘಟಕದ ಗೋಡನ್ ನಲ್ಲಿದ್ದ ಜೆಸಿಬಿ, ಕಸ ಸಂಗ್ರಹದ ಟಿಪ್ಪರ್ ವಾಹನಗಳು ಸುಟ್ಟು ಕರಕಲಾಗಿದೆ ಎಂದು ಹೇಳಲಾಗಿದೆ. ಬೆಂಕಿ ನಂದಿಸಲು ಆಗ್ನಿಶಾಮಕ ದಳ ಸತತ ೧೩ ತಾಸು ಪ್ರಯತ್ನ ನಡೆಸಿ ಆಗ್ನಿಯ ಜ್ವಾಲೆಯನ್ನು ತಹಬಂದಿಗೆ ತರಲಾಗಿದೆ.

ಪ್ಲಾಸ್ಟಿಕ್ ಸಂಗ್ರಹದ ಗೋಡನ್ ಬೆಂಕಿಗೆ ಆಹುತಿಯಾಗಿದೆ. ತ್ಯಾಜ್ಯ ವಿಲೇಬಾರಿ ಕಟ್ಟಡ ಅನಾಹುತಕ್ಕೆ ತುತ್ತಾಗಿದೆ. 50 ಲಕ್ಷ ರೂ. ನಷ್ಟವಾಗಿರಬಹುದೆಂದು ಅಂದಾಜಿಸಲಾಗಿದೆ.

ಕಸದ ರಾಶಿ ಯನ್ನು ಬೆಳಗಾವಿ ಸಿಮೆಂಟ್ ಉತ್ಪಾದನಾ ಘಟಕಕ್ಕೆ ರವಾನಿಸಲಾಗಿತ್ತಿತ್ತು. ಉಳಿದಂತೆ ಕಾಂಪೋಸ್ಟ ಗೊಬ್ಬರ ತಯಾರಿಸಲಾಗುತ್ತಿತ್ತು. ಕಬ್ಬಿಣದ ವಸ್ತು, ಎಲೆಕ್ಟ್ರಾನಿಕ್ ತ್ಯಾಜ್ಯ ಮಾರಾಟ ಮಾಡಲಾಗುತ್ತಿತ್ತು. ಹದಿನೈದು ವರ್ಷಗಳ ಹಿಂದೆ ಕರ್ನಾಟಕ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಯೋಜನೆಯಲ್ಲಿ 2 ಕೋಟಿ‌ ವೆಚ್ಚದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲಾಗಿತ್ತು‌.ನಂತರ ತ್ಯಾಜ್ಯ ವಿಲೇವಾರಿ ಶೆಡ್, ಗೊಬ್ಬರ ತಯಾರಿ ಘಟಕ, ಕಬ್ಬಿಣ, ಪ್ಲಾಸ್ಟಿಕ್ ವಿಂಗಡನಾ ಘಟಕ, ಸಂಗ್ರಹ ಗೋಡಾನ್ ನಿರ್ಮಿಸಲಾಗಿತ್ತು. ಇವೆಲ್ಲಾ ಈಗ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿವೆ.

ಶಾರ್ಟ ಸರ್ಕ್ಯೂಟ್ ಬೆಂಕಿ ಅನಾಹುತಕ್ಕೆ ಕಾರಣ ಎಂದು ನಗರಸಭೆಯ ಅಧಿಕಾರಿ ಜುಬೇನ್ ಮಹಾಪಾತ್ರ ಹೇಳಿದ್ದಾರೆ. ನಷ್ಟದ ನೈಜ ಅಂದಾಜು ಇನ್ನಷ್ಟೇ ಖಚಿತವಾಗಬೇಕಿದೆ. ದೊಡ್ಡ ದುರಂತ ತಪ್ಪಿದೆ ಎಂದು ನಗರಸಭೆಯ ಪರಿಸರ , ಆರೋಗ್ಯ ವಿಭಾಗದ ಸಿಬಂದಿ, ಅಧಿಕಾರಿಗಳು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next