ಕಾರವಾರ: ಕಾರವಾರದ ಪೊಲೀಸ್ ಪರೇಡ್ ಮೈದಾನದಲ್ಲಿ ಏರ್ಪಟ್ಟ ಸ್ವಾತಂತ್ರ್ಯೋತ್ಸವ ಪರೇಡ್ ವೇಳೆ ಮಹಿಳಾ ಪಿಎಸ್ಐ ಓರ್ವರು ಕುಸಿದು ಬಿದ್ದ ಘಟನೆ ನಡೆಯಿತು.
ಕಾರವಾರದಲ್ಲಿರುವ ಸೈಬರ್ ಕ್ರೈಂ ತನಿಖಾ ಪೊಲೀಸ್ ಠಾಣೆಯ ಪಿಎಸ್ ಐ ಆಗಿರುವ ಕೋಕಿಲಾ ತಲೆಸುತ್ತಿ ಬಿದ್ದಿದ್ದಾರೆ.
ಬೆಳಿಗ್ಗೆ ಎಂಟು ಗಂಟೆಯಿಂದ ಒಂಭತ್ತು ಗಂಟೆಯ ತನಕ ಬಿಸಿಲಿನಲ್ಲೇ ನಿಂತಿದ್ದು ತಲೆ ಸುತ್ತು ಬಂದು ಮೈದಾನದಲ್ಲೆ ಕುಸಿದು ಬೀಳಲು ಕಾರಣವಾಗಿತ್ತು. ತಕ್ಷಣ ಉಳಿದ ಪೊಲೀಸ್ ಸಿಬ್ಬಂದಿಗಳು ಪಿಎಸ್ಐ ಕೋಕಿಲಾ ಅವರಿಗೆ ನೀರು ಕುಡಿಸಿ ಆರೈಕೆ ಮಾಡಿದರು.
ಇದನ್ನೂ ಓದಿ:DK Shivakumar ಅವರ ಕೊತ್ವಾಲ್ ಮಾದರಿ ಟ್ರೀಟ್ಮೆಂಟ್ ಬಗ್ಗೆ ಭಯವಿದೆ: ಸಿ.ಟಿ ರವಿ
ಬಳಿಕ ಚೇತರಿಸಿಕೊಂಡ ಮಹಿಳಾ ಪಿಎಸ್ಐ ಅವರು ನಂತರ ಪಥಸಂಚಲನದಲ್ಲಿ ಭಾಗಿಯಾಗಿದರು.