ತಮಿಳು ನಟ ಕಾರ್ತಿ ಹುಟ್ಟುಹಬ್ಬದ ಪ್ರಯುಕ್ತ “ಜಪಾನ್’ ಸಿನಿಮಾದ ಕ್ಯಾರೆಕ್ಟರ್ ಟೀರ್ಸ ರಿಲೀಸ್ ಆಗಿದೆ. ಗೋಲ್ಡನ್ ಕಲರ್ ಬಟ್ಟೆ, ಹೇವಿ ಬಂಗಾರ ತೊಟ್ಟು ಕಾರ್ತಿ ಕಂಪ್ಲೀಟ್ ಗೋಲ್ಡನ್ ಮ್ಯಾನ್ ಆಗಿ ಪ್ರತ್ಯಕ್ಷರಾಗಿದ್ದಾರೆ. ಕೈಯಲ್ಲಿ ಗೋಲ್ಡನ್ ಬಣ್ಣದ ಗನ್ ಹಿಡಿದು, ಕರ್ಲಿ ಹೇರ್ ಸ್ಟೈಲ್ ನಲ್ಲಿ ಮಿಂಚಿದ್ದಾರೆ.
ಜೋಕರ್ ಸಿನಿಮಾ ಮೂಲಕ ನ್ಯಾಷನಲ್ ಅವಾರ್ಡ್ ಗೆ ಮುತ್ತಿಟ್ಟಿದ್ದ ನಿರ್ದೇಶಕ ರಾಜು ಮುರುಗನ್ ನಿರ್ಮಾಪಕರಾದ ಎಸ್ ಆರ್ ಪ್ರಕಾಶ್ ಬಾಬು ಹಾಗೂ ಎಸ್ ಆರ್.ಪ್ರಭು ಜಪಾನ್ ಸಿನಿಮಾ ಮೂಲಕ ಮತ್ತೂಮ್ಮೆ ಕೈ ಜೋಡಿಸಿದ್ದಾರೆ. ಡ್ರೀಮ್ ವಾರಿರ್ಯ ಪಿಕ್ಚರ್ಸ್ ಮೂಲಕ ಈ ಚಿತ್ರ ನಿರ್ಮಿಸುತ್ತಿದ್ದಾರೆ.
ಕಾರ್ತಿ ನಟನೆಯ 25ನೇ ಸಿನಿಮಾವಾಗಿರುವ ಜಪಾನ್ ಪ್ಯಾನ್ ಇಂಡಿಯಾ ಪ್ರಾಜೆಕ್ಟ್. ಶೂಟಿಂಗ್ ಹಂತದಲ್ಲಿರುವ ಜಪಾನ್ ಸಿನಿಮಾವನ್ನು ದೀಪಾವಳಿಗೆ ಚಿತ್ರವನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗುತ್ತಿದೆ.