ಲಕ್ನೋ: ವಿಂಡೀಸ್‌ನ ದಢೂತಿ ಆಫ್ಸ್ಪಿನ್ನರ್ ರಖೀಮ್ ಕಾರ್ನ್ವಾಲ್ ಜೀವನಶ್ರೇಷ್ಠ ಬೌಲಿಂಗ್ ಸಾಧನೆಯೊಂದಿಗೆ ಅಫ್ಘಾನಿಸ್ಥಾನಕ್ಕೆ ಆಘಾತವಿಕ್ಕಿದ್ದಾರೆ. ಬುಧವಾರ ಲಕ್ನೋದಲ್ಲಿ ಮೊದ ಲ್ಗೊಂಡ ಏಕೈಕ ಟೆಸ್ಟ್ ಪಂದ್ಯದಲ್ಲಿ ಕಾರ್ನ್ವಾಲ್ 75 ರನ್ನಿಗೆ 7 ವಿಕೆಟ್ ಉಡಾಯಿಸಿದ್ದರ ಪರಿಣಾಮ
ಅಫ್ಘಾನ್ ಮೊದಲ ಇನ್ನಿಂಗ್ಸ್ ನಲ್ಲಿ 187 ರನ್ನಿಗೆ ಆಲೌಟ್ ಆಗಿದೆ. ಜವಾಬಿತ್ತ ವಿಂಡೀಸ್ 2 ವಿಕೆಟ್ ಕಳೆ ದುಕೊಂಡು 68 ರನ್ ಮಾಡಿದೆ.
ಟಾಸ್ ಗೆದ್ದ ವೆಸ್ಟ್ ಇಂಡೀಸ್ ಮೊದಲು ಬೌಲಿಂಗ್ ಆಯ್ದುಕೊಂಡಿತ್ತು. ಅಫ್ಘಾನ್ ಎಚ್ಚರಿಕೆಯಿಂದಲೇ ಬ್ಯಾಟಿಂಗ್ ಆರಂಭಿಸಿತು. ಒಂದು ಹಂತದಲ್ಲಿ ಒಂದೇ ವಿಕೆಟಿಗೆ 84 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. ಆದರೆ ರಖೀಮ್ ಕಾರ್ನ್ವಾಲ್ ದಾಳಿಗಿಳಿದೊಡನೆ ಆಟದ ಚಿತ್ರಣ ಸಂಪೂರ್ಣ ಬದಲಾಯಿತು. ಅವರು ಲಕ್ನೋದ ಟರ್ನಿಂಗ್ ಟ್ರ್ಯಾಕ್‌ನ ಸಂಪೂರ್ಣ ಲಾಭವೆತ್ತಿದರು.
ಅಫ್ಘಾನ್ ಮಧ್ಯಮ ಕ್ರಮಾಂಕದ ಮೇಲೆ ಕಾರ್ನ್ವಾಲ್ ಘಾತಕವಾಗೆರಗಿದರು. ಒಂದಕ್ಕೆ 84 ರನ್ ಮಾಡಿದ್ದ ರಶೀದ್ ಖಾನ್ ಪಡೆ, 98ಕ್ಕೆ ತಲಪುವಷ್ಟರಲ್ಲಿ 6 ವಿಕೆಟ್ ಉರುಳಿಸಿಕೊಂಡಿತ್ತು. ಕೆಳ ಹಂತದಲ್ಲಿ ಕೀಪರ್ ಅಫÕರ್ ಜಜಾಯ್ (32) ಮತ್ತು ಬೌಲರ್ ಆಮಿರ್ ಹಮ್ಜ (34) ಹೋರಾಟ ನಡೆಸಿ ಮೊತ್ತವನ್ನು ಸ್ವಲ್ಪ ಮಟ್ಟಿಗೆ ಏರಿಸಿದರು. 39 ರನ್ ಮಾಡಿದ ಆರಂಭಕಾರ ಜಾವೇದ್ ಅಹ್ಮದಿ ಅವರದೇ ಗರಿಷ್ಠ ಗಳಿಕೆ.
ವಿಂಡೀಸ್ ಕ್ರೆಗ್ ಬ್ರಾತ್‌ವೇಟ್ (11), ಶೈ ಹೋಪ್ (7) ವಿಕೆಟ್ ಕಳೆದು ಕೊಂಡಿದೆ. ಜಾನ್ ಕ್ಯಾಂಬೆಲ್ (30), ಶಮರ್ ಬ್ರೂಕ್ಸ್ (19) ಕ್ರೀಸಿನಲ್ಲಿದ್ದಾರೆ.