Advertisement
ಈ ರಸ್ತೆಯಲ್ಲಿ ಸಂಚಾರ ನಿಷೇಧದಿಂದ ಜಿ.ಪಂ. ರಸ್ತೆಯಲ್ಲಿ ವಾಹನಗಳ ಒತ್ತಡ ಮತ್ತು ವಾಹನಗಳಲ್ಲಿ ಮಿತಿಗಿಂತ ಹೆಚ್ಚು ಲೋಡ್ ಹಾಕಿ, ಅತೀ ವೇಗವಾಗಿ ಸಂಚರಿಸುತ್ತಿವೆ. ಈ ರಸ್ತೆಯ ಸಂಚಾರವೇ ದುಸ್ತರವೆನಿಸಿದೆ.
Related Articles
ಕರ್ನೂರು-ಗಾಳಿಮುಖ ರಸ್ತೆ ಹೊಂಡಗ ಳಿಂದ ಕೂಡಿದೆ. ಲಘು ವಾಹನ, ದ್ವಿಚಕ್ರ, ತ್ರಿಚಕ್ರ ವಾಹನ ಸಂಚಾರಕ್ಕೆ ಅಯೋಗ್ಯವಾದರೂ ವಾಹನ ಸಂಚಾರ ಅನಿವಾರ್ಯವಾಗಿದೆ. ಏಕೆಂದರೆ ಇದು ಕೇರಳ ರಾಜ್ಯವನ್ನು ಸಂಪರ್ಕಿಸುವ ಸಮೀಪದ ರಸ್ತೆಯಾಗಿದೆ. ಅಕ್ರಮ ಸಾಗಾಟದ ಘನವಾಹನಗಳು ವೇಗವಾಗಿ ಸಂಚರಿಸುವುದರಿಂದ ಮತ್ತು ಬೇರೆ ವಾಹನಗಳಿಗೆ ಸೈಡ್ ಕೊಡದೇ ಇರುವುದರಿಂದ ರಸ್ತೆಯಲ್ಲಿ ಧೂಳಿನ ಮಜ್ಜನವಾಗುತ್ತಿದೆ. ಅಕ್ರಮ ಚಟುವಟಿಕೆಯ ವಾಹನಗಳಿಗೆ ಅಧಿಕಾರಿಗಳು ಬ್ರೇಕ್ ಹಾಕ ಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
Advertisement
ಅಪಾಯಕಾರಿ ಕಿರುಸೇತುವೆಕರ್ನೂರು ಸಮೀಪ ಕೋಟಿಗದ್ದೆ ಕಿರು ಸೇತುವೆ ಅಪಾಯಕಾರಿಯಾಗಿದೆ. ಕಳೆದ ಮಳೆಗಾಲದಲ್ಲಿ ಜಿ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಅನಿತಾ ಹೇಮನಾಥ ಶೆಟ್ಟಿ, ಜಿ.ಪಂ.ಸಹಾಯಕ ಅಭಿಯಂತರು, ಜಿ.ಪಂ. ಎಂಜಿನಿಯರ್ ಗೋವರ್ಧನ್ ಅಪಾಯ ಕಾರಿ ಸೇತುವೆ ಬಗ್ಗೆ ಪರಿಶೀಲನೆ ನಡೆಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈ ರಸ್ತೆಯಲ್ಲಿ ಘನ, ಭಾರೀ ಗಾತ್ರದ ವಾಹನಗಳಲ್ಲಿ ಅಕ್ರಮ ಮರ, ಮರಳು ಕೇರಳಕ್ಕೆ ವ್ಯಾಪಕ ವಾಗಿ ತೆರಳುತ್ತಿದ್ದರೂ ಅಧಿಕಾರಿಗಳು ಮೂಕಪ್ರೇಕ್ಷಕರಾಗಿ ಇರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ಡಾಮರು ಕಿತ್ತು ಹೋಗಿದೆ
ಕರ್ನೂರು – ಗಾಳಿಮುಖ ಜಿ.ಪಂ. ರಸ್ತೆಯನ್ನು ಕಳೆದ ವರ್ಷ ಬೇಸಗೆಯಲ್ಲಿ ಡಾಮರು ರಸ್ತೆಯಾಗಿ ಪರಿವರ್ತಿಸಲಾಗಿದೆ. ಆದರೆ ಒಂದು ಮಳೆಗಾಲ ಕಳೆಯುವಷ್ಟರಲ್ಲಿ ಡಾಮರು ಕಿತ್ತು ಹೋಗಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕಳೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಮರು ಡಾಮರು ಕಾಮಗಾರಿ ನಡೆಸುವಂತೆ ಒತ್ತಾಯಿಸಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ಗಡಿಭಾಗದ ರಸ್ತೆಯ ವಿಷಯದಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ. ಸಮರ್ಪಕ ರಸ್ತೆ ವ್ಯವಸ್ಥೆ ಇದ್ದರೆ ಎರಡು ರಾಜ್ಯಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಲಿದೆ. ಅಗತ್ಯತೆಗೆ ಸ್ಪಂದಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಕೆ
ಕೋಟಿಗದ್ದೆ ಕಿರುಸೇತುವೆಯ ಬಗ್ಗೆ ಮಳೆಗಾಲದಲ್ಲಿ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದೆ. ಮಳೆಹಾನಿಯಿಂದ ಅನುದಾನ ಸಿಗಬೇಕಾಗಿದೆ. ಈವರೆಗೆ ಯಾವುದೇ ರೀತಿಯ ಅನುದಾನ ಬಂದಿಲ್ಲ. ಗಾಳಿಮುಖ-ಕರ್ನೂರು ರಸ್ತೆಯನ್ನು ಸರಿಪಡಿಸುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಎಂಜಿನಿಯರ್ ಗೋವರ್ಧನ್ ಅವರು ತಿಳಿಸಿದ್ದಾರೆ. ಹಿಂದೆಯೇ ಪ್ರಸ್ತಾವನೆ ಸಲ್ಲಿಕೆ
ಪಂಚೋಡಿ-ಗಾಳಿಮುಖ ಜಿ.ಪಂ. ರಸ್ತೆಯಲ್ಲಿ ವಾಹನಗಳ ಒತ್ತಡ ಇದೆ. ಜಿ.ಪಂ. ರಸ್ತೆಯನ್ನು
ಮೇಲ್ದರ್ಜೆಗೇರಿಸುವಂತೆ ಹಲವು ಬಾರಿ ಮನವಿ ಮಾಡಲಾಗಿದೆ. ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವಧಿಯಲ್ಲಿಯೇ ಈ ರಸ್ತೆಯನ್ನು ಅಭಿವೃದ್ಧಿಗೊಳಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗ ಏನಾಗಿದೆ ಗೊತ್ತಿಲ್ಲ. ಈ ರಸ್ತೆಯ ಬಗ್ಗೆ ಶಾಸಕರು, ಅಧಿಕಾರಿಗಳೊಂದಿಗೆ
ಚರ್ಚಿಸಲಾಗುವುದು.
-ಶ್ರೀರಾಮ್ ಪಕ್ಕಳ, ಉಪಾಧ್ಯಕ್ಷ,
ನೆಟ್ಟಣಿಗೆಮುಟ್ನೂರು ಗ್ರಾ.ಪಂ.