ಭೋಪಾಲ್: ಮಧ್ಯಪ್ರದೇಶದ ರಜಪೂತ ಕರ್ಣಿ ಸೇನೆಯ ಕಾರ್ಯಾಧ್ಯಕ್ಷರೊಬ್ಬರು ಗುಂಡೇಟುಗಳಿಂದ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಗುರುವಾರ ವರದಿಯಾಗಿದೆ.
ಸೇನೆಯ ಜಿಲ್ಲಾ ಕಾರ್ಯಾಧ್ಯಕ್ಷರಾಗಿದ್ದ 27 ವರ್ಷದ ಮೋಹಿತ್ ಪಟೇಲ್ ಬುಧವಾರ ರಾತ್ರಿ ತಮ್ಮ ಮನೆಯಿಂದ ತೆರಳಿದ್ದು, ಮಾರ್ಗಮಧ್ಯೆ ಸ್ನೇಹಿತರಿಗೆ ಕರೆ ಮಾಡಿ ಸ್ಥಳವೊಂದಕ್ಕೆ ಬರುವಂತೆ ತಿಳಿಸಿದ್ದಾರೆ.
ಸ್ನೇಹಿತರು ಬರುವವೇಳೆಗಾಗಲೇ ಕಾರಿನಲ್ಲೇ ಶವವಾಗಿ ಪತ್ತೆಯಾಗಿದ್ದಾರೆ. ಮೋಹಿತ್ ಎದೆಗೆ ಎರಡು ಗುಂಡುಗಳು ತಾಗಿದ್ದು, ಅವರದ್ದೇ ಗನ್‌ನಿಂದ ಬುಲೆಟ್ ಫೈಯರ್ ಆಗಿದೆ ಎನ್ನಲಾಗಿದೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.
ಈ ಕುರಿತು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Related Articles