ಪಣಜಿ: ಗೋವಾ ಮಾಜಿ ನೀರಾವರಿ ಸಚಿವ, ಬಿಜೆಪಿ ನಾಯಕ ದಯಾನಂದ್ ಮಹೇಂದ್ರಕರ್ ಅವರು ಮಹಾದಾಯಿ ನದಿ ವಿವಾದದ ಬಗ್ಗೆ ಕರ್ನಾಟದ ಧೋರಣೆಯು ದುರ್ಯೋಧನನ ಧೋರಣೆಗೆ ಹೋಲಿಸಿದ್ದಾರೆ.
ಮಹಾದಾಯಿ ನದಿ ತಿರುವು ಸಂಬಂಧ ಕರೆದಿದ್ದ ಶಾಸಕರ ಸಭೆಯಲ್ಲಿ ಮಾತನಾಡಿದ ಅವರು, “ಗೋವಾ ಮತ್ತು ಕರ್ನಾಟಕ ನೆರೆಯುವರು. ನಾವು ನಮ್ಮ ಗ್ರಾಮದಲ್ಲಿ, ನೆರೆ-ಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುತ್ತೇವೆ. ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ಅವರ ಜತೆಗಿರುತ್ತೇವೆ. ಆದರೆ ಕರ್ನಾಟಕದ ಧೋರಣೆ ಗಮನಿಸಿದರೆ ನನಗೆ ಮಹಾಭಾರತದ ದುರ್ಯೋಧನ ನೆನಪಿಗೆ ಬರುತ್ತಾನೆ,’ ಎಂದಿದ್ದಾರೆ.
“ದುರ್ಯೋಧನ ತನ್ನ ಕೆಟ್ಟ ಛಲದಿಂದ ಪಾಂಡವರಿಗೆ ನ್ಯಾಯಯುತವಾಗಿ ನೀಡಬೇಕಾದ ರಾಜ್ಯವನ್ನು ಹಿಂತಿರುಗಿಸಿಲ್ಲ. ಕೊನೆಗೆ ಒಂದು ಸೂಚಿ ಮೊನೆಯಷ್ಟು ಜಾಗವನ್ನು ಸಹ ನೀಡುವುದಿಲ್ಲ ಎಂದು ಹಠ ಹಿಡಿದ. ಅವನು ಎಲ್ಲರನ್ನು ಬೆದರಿಸುತ್ತಾ ಇದ್ದ,’ ಎಂದು ಹೇಳಿದ್ದಾರೆ.