Advertisement

ಪಿಎಸ್‌ಐ ಅಕ್ರಮ: ಸದನ ರಣರಂಗ

11:32 PM Sep 20, 2022 | Team Udayavani |

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಆರೋಪ ಸಂಗತಿ ಮಂಗಳವಾರ ವಿಧಾನ ಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್‌ ಮಧ್ಯೆ ಕೋಲಾಹಲ ಸೃಷ್ಟಿಸಿ ರಣರಂಗದ ವಾತಾವರಣ ನಿರ್ಮಿಸಿತು.

Advertisement

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನೇರ- ನೇರವಾಗಿ ಆರೋಪ ಪ್ರತ್ಯಾರೋಪದಲ್ಲಿ ತೊಡಗಿ ಎರಡೂ ಪಕ್ಷದ ಸದಸ್ಯರು ವಾಕ್ಸಮರದಲ್ಲಿ ಮುಳುಗಿದರು. ಒಂದು ಹಂತದಲ್ಲಿ ಸಿಎಂ, ನಿಮ್ಮ ಸರಕಾರದ ಹಗರಣಗಳನ್ನೂ ಬಿಚ್ಚಿಡುತ್ತೇವೆ ಎಂದಾಗ, ನೀವು ಅಧಿಕಾರಕ್ಕೆ ಬಂದು 3 ವರ್ಷ ವಾಯಿತು. ಆಗಿನಿಂದ ಕಡುಬು ಬಾಯಿಗೆ ಸಿಕ್ಕಿಸಿ ಕೊಂಡಿದ್ದೀರಾ ಅಥವಾ ಕಡಲೇಕಾಯಿ ತಿನ್ನು ತ್ತಿದ್ದೀರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ನಿಮ್ಮದು ಡಿಸ್ಟ್ರೆಕ್ಟಿವ್‌ ವಿಪಕ್ಷ. ನೀವೊಬ್ಬ ಗ್ರೇಟೆಸ್ಟ್‌  ಇವೆಂಟ್‌ ಮ್ಯಾನೇಜರ್‌ ಎಂದು ಸಿಎಂ ಬೊಮ್ಮಾಯಿ ಕುಟುಕಿದರೆ,  “ನಿಮಗೆ ನನ್ನ ಮೇಲೆ ಭಯ ಇರುವುದರಿಂದ ನನ್ನನ್ನೇ ಗುರಿ ಮಾಡಿಕೊಂಡು ಮಾತನಾಡುತ್ತಿದ್ದೀರಿ. ನಾನು ಇದ್ಯಾವುದಕ್ಕೂ ಹೆದರುವುದಿಲ್ಲ. ಮೋರ್‌ ಸ್ಟ್ರಾಂಗ್‌ ಮೋರ್‌ ಎನಿಮಿ, ಲೆಸ್‌ ಸ್ಟ್ರಾಂಗ್‌ ಲೆಸ್‌ ಎನಿಮಿ, ನೋ ಸ್ಟ್ರಾಂಗ್‌ ನೋ ಎನಿಮಿ ಎಂಬಂತೆ ನೀವು ಎಷ್ಟೇ ನನ್ನ ವಿರುದ್ಧ ದಾಳಿ ಮಾಡಿ ದರೂ ಅದರಿಂದ ನನಗೆ ಮತ್ತು ಕಾಂಗ್ರೆಸ್‌ಗೆ ಲಾಭ ವಾಗ ಲಿದೆ. ನೀವೇನೇ ಮಾಡಿದರೂ ಜನರು ನಿಮ್ಮನ್ನು ನಂಬುವುದಿಲ್ಲ. ನಾನು ತಪ್ಪು ಮಾಡಿದ್ದರೆ ಅಥವಾ ನಮ್ಮ ಆಡಳಿತದ ಸಂದರ್ಭದಲ್ಲಿ ತಪ್ಪುಗಳು ಆಗಿದ್ದರೆ ತನಿಖೆ ಮಾಡಿ. ಇಂಥದ್ದಕ್ಕೆಲ್ಲ ಹೆದರುವ ಮಾತೇ ಇಲ್ಲ’ ಎಂದರು ಸಿದ್ದರಾಮಯ್ಯ.

ಮುಖ್ಯಮಂತ್ರಿ ಬೊಮ್ಮಾಯಿ :

  • ನಿಮ್ಮ ಅಧಿಕಾರ ಅವಧಿಯಲ್ಲಿ ನಡೆದ ನೇಮಕಾತಿಯಲ್ಲಿ ಅಕ್ರಮ ನಡೆದಿಲ್ಲ ಎನ್ನುವವರು ಏಕೆ ಪ್ರಕರಣವನ್ನು ಸಿಐಡಿಗೆ ನೀಡಿ, ತನಿಖೆ ಪೂರ್ಣಗೊಳಿಸಿಲ್ಲ?
  • ಕೊನೆಯ ಚುನಾವಣೆ ಎಂದು ನೀವು ಮಾತ್ರ ಮುಂದೆ ಬಂದು, ಹಲವರನ್ನು ಅಲ್ಲೇ ಬಿಟ್ಟಿದ್ದೀರಿ
  • ವಿನಾಶಕಾರಿ ವಿರೋಧಪಕ್ಷ. ಇವೆಂಟ್‌ ಮ್ಯಾನೇಜ್ಮೆಂಟ್‌ ಚೆನ್ನಾಗಿ ಮಾಡು ವು ದನ್ನು ಕಲಿತಿದ್ದೀರಿ
  • ಜನರ ಮುಂದೆ ಹೋಗೋಣ ಯಾರು ಸಮರ್ಥರು ಎಂಬುದನ್ನು ನಿರ್ಧರಿಸುತ್ತಾರೆ
  • ನಾವು ಎಲ್ಲ ರೀತಿಯ ಚರ್ಚೆಗೂ ಸಿದ್ಧರಿದ್ದೇವೆ.

ಸಿದ್ದರಾಮಯ್ಯ :

  • ನೀವೇನೇ ಮಾಡಿದರೂ ಹೆದರುವುದಿಲ್ಲ. ಇದರಿಂದ ನನಗೆ ಮತ್ತು ನಮ್ಮ ಪಕ್ಷಕ್ಕೆ ಲಾಭ
  • ಯಾರ ಕುರ್ಚಿಯೂ ಶಾಶ್ವತವಲ್ಲ. ಎಲ್ಲವನ್ನೂ ಜನ ನೋಡುತ್ತಾರೆ.
  • ಹಿಂದಿನ ಸರಕಾರದಲ್ಲಿ ಅಕ್ರಮ ನಡೆದಿದ್ದರೆ ಇದು ವರೆಗೆ ತನಿಖೆ ಮಾಡಿಲ್ಲ ಏಕೆ? ಕಡಲೆ ಕಾಯಿ ತಿನ್ನುತ್ತಿದ್ದೀರಾ?
  • ಎಲ್ಲ ಅಕ್ರಮದ ಬಗ್ಗೆ ನ್ಯಾಯಾಂಗ ತನಿಖೆ ಮಾಡಿಸಿ
  • ಸಂವಿಧಾನ, ಪ್ರಜಾ ಪ್ರಭುತ್ವ, ಜಾತ್ಯಾತೀತತೆ ಮೇಲೆ ನಂಬಿಕೆ ಇಲ್ಲದವರು ನೀವು.
Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next