Advertisement
ಮೊದಲು ಬ್ಯಾಟಿಂಗ್ ನಡೆಸಿದ ಸಿಕ್ಕಿಂ 18.2 ಓವರ್ಗಳಲ್ಲಿ 82ಕ್ಕೆ ಉರುಳಿದರೆ, ಕರ್ನಾಟಕ ಕೇವಲ 5.4 ಓವರ್ಗಳಲ್ಲಿ 2 ವಿಕೆಟಿಗೆ 86 ರನ್ ಮಾಡಿತು. ಇದರಿಂದ ತಂಡದ ರನ್ರೇಟ್ನಲ್ಲಿ ಸಾಕಷ್ಟು ಪ್ರಗತಿ ಯಾಯಿತು. ಆದರೆ ಅಂಕಪಟ್ಟಿಯಲ್ಲಿ ಕರ್ನಾಟಕ 5ರಷ್ಟು ಕೆಳಸ್ಥಾನದಲ್ಲಿದೆ (4 ಅಂಕ, 1.702 ರನ್ರೇಟ್). ಕರ್ನಾಟಕವಿನ್ನು ತಮಿಳುನಾಡು, ಬರೋಡ ಮತ್ತು ಗುಜರಾತ್ನಂಥ ಬಲಿಷ್ಠ ತಂಡಗಳನ್ನು ಎದುರಿಸಬೇಕಿದೆ.ಶ್ರೇಯಸ್ ಗೋಪಾಲ್ 5 ವಿಕೆಟ್ ಉಡಾಯಿಸಿ ಸಿಕ್ಕಿಂಗೆ ಬಲವಾದ ಆಘಾತವಿಕ್ಕಿದರು. ವಿದ್ಯಾಧರ ಪಾಟೀಲ್ 3 ಮತ್ತು ವಿಜಯ್ಕುಮಾರ್ ವೈಶಾಖ್ 2 ವಿಕೆಟ್ ಉರು ಳಿಸಿದರು. 18 ರನ್ ಮಾಡಿದ ಆಶಿಷ್ ಥಾಪಾ ಸಿಕ್ಕಿಂ ಸರದಿಯ ಗರಿಷ್ಠ ಸ್ಕೋರರ್.
ಮುಂಬಯಿ: ಮಣಿಪುರ ವಿರುದ್ಧದ ಪಂದ್ಯದಲ್ಲಿ ದಿಲ್ಲಿಯ ಎಲ್ಲ 11 ಮಂದಿ ಆಟಗಾರರು ಬೌಲಿಂಗ್ ನಡೆಸಿದ್ದು ವಿಶೇಷವಾಗಿತ್ತು. ನಾಯಕ ಆಯುಷ್ ಬದೋನಿ ಅವರ ಈ ಅಚ್ಚರಿಯ ನಿರ್ಧಾರದಿಂದಾಗಿ ವಿಕೆಟ್ ಕೀಪರ್ ಅನುಜ್ ರಾವತ್ ಕೂಡ ಬೌಲಿಂಗ್ ನಡೆಸುವ ಅವಕಾಶ ಪಡೆದರು. ಮೂವರು ತಲಾ 3 ಓವರ್, ಮತ್ತೆ ಮೂವರು ತಲಾ 2 ಓವರ್, 5 ಮಂದಿ ಒಂದೊಂದು ಓವರ್ ಎಸೆದರು. ಇದರಲ್ಲಿ 2 ಓವರ್ ಮೇಡನ್ ಆಗಿತ್ತು.
Related Articles
ಹೈದರಾಬಾದ್: ಮುಂಬಯಿ ಬೌಲರ್ ಶಾರ್ದೂಲ್ ಠಾಕೂರ್ ಈ ಪಂದ್ಯಾವಳಿಯ ಇತಿಹಾಸದ ಅತ್ಯಂತ ದುಬಾರಿ ಬೌಲಿಂಗ್ ದಾಖಲೆಯನ್ನು ಸರಿದೂಗಿಸಿದರು. ಕೇರಳ ವಿರುದ್ಧದ ಪಂದ್ಯದಲ್ಲಿ ಅವರ 4 ಓವರ್ಗಳಲ್ಲಿ 69 ರನ್ ಸೋರಿ ಹೋಯಿತು. ಕೆಲವು ದಿನಗಳ ಹಿಂದೆ ಹರಿಯಾಣ ವಿರುದ್ಧ ಅರುಣಾಚಲ ಪ್ರದೇಶದ ರಮೇಶ್ ರಾಹುಲ್ ಕೂಡ ಇಷ್ಟೇ ರನ್ ನೀಡಿದ್ದರು. ಹಿಂದಿನ ದಾಖಲೆ ಹೈದರಾಬಾದ್ನ ಪಗಡಾಲ ನಾಯ್ಡು ಹೆಸರಲ್ಲಿತ್ತು (67ಕ್ಕೆ 1).
ಈ ಪಂದ್ಯವನ್ನು ಕೇರಳ 43 ರನ್ನುಗಳಿಂದ ಜಯಿಸಿತು. ಕೇರಳ 5 ವಿಕೆಟಿಗೆ 254 ರನ್ ಪೇರಿಸಿದರೆ, ಮುಂಬಯಿ 9ಕ್ಕೆ 191 ರನ್ ಮಾಡಿತು.
Advertisement