Advertisement

 ಪಿಲಿಕುಳ ಮೃಗಾಲಯಕ್ಕೆ ಆಗಮಿಸಿದ ಬಿಳಿಹುಲಿ

02:39 AM May 05, 2022 | Team Udayavani |

ಮಂಗಳೂರು: ಕೇಂದ್ರ ಮೃಗಾಲಯ ಪ್ರಾಧಿಕಾರದ ಪ್ರಾಣಿ ವಿನಿಮಯ ಯೋಜನೆಯಡಿಯಲ್ಲಿ ಚೆನ್ನೈಯ ಅರಿಗ್ನಾರ್‌ ಅಣ್ಣಾ ಮೃಗಾಲಯದಿಂದ ಪಿಲಿಕುಳ ಮೃಗಾಲಯಕ್ಕೆ ಬಿಳಿ ಹುಲಿಯೊಂದನ್ನು ತರಿಸಿಕೊಳ್ಳಲಾಗಿದೆ.

Advertisement

ಈ ಬಿಳಿ ಹೆಣ್ಣು ಹುಲಿ ಕಾವೇರಿ ಮಾತ್ರವಲ್ಲದೆ ಹೆಣ್ಣು ಉಷ್ಟ್ರ ಪಕ್ಷಿಯೊಂದನ್ನು ಕೂಡ ತರಲಾಗಿದೆ. ಇದಕ್ಕೆ ಬದಲಾಗಿ ಪಿಲಿಕುಳದಿಂದ ಅಲ್ಲಿನ ಮೃಗಾಲಯಕ್ಕೆ ಒಂದು ಬೆಂಗಾಲಿ ಹುಲಿ “ಸಂಜಯ್‌’ ಮತ್ತು ನಾಲ್ಕು ಕಾಡುನಾಯಿಗಳು ಹಾಗೂ ಕೆಲವು ಉರಗಗಳನ್ನು ಕಳುಹಿಸಿ ಕೊಡಲಾಗುವುದು.

ಹೊಸದಾಗಿ ಆಗಮಿಸಿರುವ ಬಿಳಿಹುಲಿಯನ್ನು ಕ್ವಾರಂಟೈನ್‌ನಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದ್ದು, ಸ್ಥಳೀಯ ಪರಿಸರಕ್ಕೆ ಒಗ್ಗಿದ ಬಳಿಕ ವಾರದೊಳಗೆ ಸಾರ್ವಜನಿಕ ವೀಕ್ಷಣೆಗೆ ಅವಕಾಶ ನೀಡಲಾಗುವುದು.

ಪಿಲಿಕುಳದಲ್ಲಿ ಈಗಾಗಲೇ 7 ಗಂಡು, 4 ಹೆಣ್ಣು ಸಹಿತ 11 ಹುಲಿಗಳು ಮತ್ತು ಎರಡು ಗಂಡು ಉಷ್ಟ್ರಪಕ್ಷಿಗಳು ಇವೆ.

ಗುಜರಾತಿನ ರಾಜ್‌ಕೋಟ್‌ನಿಂದ ಏಷ್ಯಾಟಿಕ್‌ ಸಿಂಹ, ಭಾರತೀಯ ತೋಳಗಳು, ಕೆಲವು ಅಪರೂಪದ ಪಕ್ಷಿಗಳನ್ನು; ಮಹಾರಾಷ್ಟ್ರದ ಗೋರೆವಾದ ಮೃಗಾಲಯದಿಂದ ಬಿಳಿ ಕೃಷ್ಣಮೃಗಗಳು, ಕರಡಿಗಳು ಹಾಗೂ ಒಡಿಶಾದ ನಂದನ ಕಾನನ ಮೃಗಾಲಯದ ಅಪರೂಪದ ಜಿಂಕೆ, ನೀಲಗಾಯಿ ಗಳು, ಪಕ್ಷಿಗಳನ್ನು ಪ್ರಾಣಿ ವಿನಿಮಯ ಯೋಜನೆಯಡಿ ತರಿಸಲು ಕ್ರಮ ಕೈಗೊಳ್ಳಲಾಗಿದ್ದು, ಮೃಗಾಲಯ ಪ್ರಾಧಿಕಾರದ ಒಪ್ಪಿಗೆ ಲಭಿಸಿದೊಡನೆ ತರಲಾಗುವುದು ಎಂದು ಮೃಗಾಲಯದ ನಿರ್ದೇಶಕ ಎಚ್‌.ಜೆ. ಭಂಡಾರಿ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next