ಬೆಂಗಳೂರು: ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಉತ್ಕೃಷ್ಟ ಮಟ್ಟದ ಪ್ರದರ್ಶನ ತೋರಿದ ಪಂಜಾಬ್ ಮಂಗಳವಾರದ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ನಗರದ ಹೊರವಲಯ ದಲ್ಲಿರುವ ಅಲೂರು ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕರುಣ್ ನಾಯರ್ ನೇತೃತ್ವದ ಕರ್ನಾಟಕ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ವೈಫಲ್ಯ ಅನುಭವಿಸಿ ಪಂಜಾಬ್‌ಗ ಶರಣಾಯಿತು.
ಟಾಸ್ ಸೋತು ಬ್ಯಾಟಿಂಗಿಗೆ ಇಳಿ ಸಲ್ಪಟ್ಟ ಕರ್ನಾಟಕ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 125ರನ್ ಗಳಿಸಲಷ್ಟೆ ಶಕ್ತವಾಯಿತು. ಬಳಿಕ ಗುರಿ ಬೆನ್ನತ್ತಿದ ಪಂಜಾಬ್ 14.4 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 127 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಪಂಜಾಬ್‌ಗ ಉತ್ತಮ ಆರಂಭ :
ಗುರಿ ಬೆನ್ನತ್ತಿದ ಪಂಜಾಬ್‌ಗ ಆರಂಭಿಕರಾದ ಅಭಿಷೇಕ್ ಶರ್ಮ (30) ಮತ್ತು ಸಿಮ್ರಾನ್ ಸಿಂಗ್ ಉತ್ತಮ ಅಡಿಪಾಯ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 93 ರನ್ ಒಟ್ಟುಗೂಡಿಸಿತು. ಅಂತಿಮವಾಗಿ ಕೆ. ಗೌತಮ್ ಈ ಜೋಡಿಯನ್ನು ಮುರಿ ಯುವಲ್ಲಿ ಯಶಸ್ವಿಯಾದರು. ಆದರೆ ಅದಾಗಲೇ ಪಂದ್ಯ ಕೈಜಾರಿ ಹೋಗಿತ್ತು. ಸಿಮ್ರಾನ್ 52 ಎಸೆತಗಳಿಂದ ಅಜೇಯ 89 ರನ್ ಪೇರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಅಮೋಘ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಮತ್ತು 5 ಸಿಕ್ಸರ್ ಒಳಗೊಂಡಿತ್ತು.
ಕರ್ನಾಟಕ ಪರ ರೋಹನ್ ಕದಂ (32) ರನ್ ಹೊರತು ಪಡಿಸಿದರೆ ಮತ್ಯಾವ ಆಟಗಾರರು 20ರ ಗಡಿ ದಾಟುವಲ್ಲಿ ಯಶಸ್ವಿಯಾಗಲಿಲ್ಲ. ಸಿದ್ದಾರ್ಥ್ ಕೌಲ್ 4 ಓವರ್‌ನಲ್ಲಿ 26 ರನ್ ನೀಡಿ 4 ವಿಕೆಟ್ ಕಿತ್ತು ಘಾತಕ ಸ್ಪೆಲ್ ನಡೆಸಿದರು. ಉಳಿದಂತೆ ಆರ್ಷದೀಪ್ ಸಿಂಗ್ 2 ವಿಕೆಟ್ ಕಿತ್ತರು.
ಸಂಕ್ಷಿಪ್ತ ಸ್ಕೋರ್: ಕರ್ನಾಟಕ 8 ವಿಕೆಟಿಗೆ 125 (ರೋಹನ್ ಕದಂ 32, ಪಡಿಕಲ್ 19, ಸಿದ್ದಾರ್ಥ್ 26ಕ್ಕೆ 4, ಆರ್ಷದೀಪ್ 18ಕ್ಕೆ 2), ಪಂಜಾಬ್ 14.4 ಓವರ್‌ಗಳಲ್ಲಿ ಒಂದು ವಿಕೆಟಿಗೆ 127 (ಅಭಿಷೇಕ್ ಶರ್ಮ 30, ಸಿಮ್ರಾನ್ ಸಿಂಗ್ ಅಜೇಯ 89, ಕೆ. ಗೌತಮ್ 28ಕ್ಕೆ 1).