Advertisement
ಬೆಳಗ್ಗೆ ವಿಶ್ವಕರ್ಮ ಹೋಮ ಬಳಿಕ ವಿವಿಧ ಭಜನ ಮಂಡಳಿಗಳಿಂದ ಭಜನ ಕಾರ್ಯಕ್ರಮ ಹಾಗೂ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಹಾಗೂ ಮನೋರಂಜನ ಕಾರ್ಯಕ್ರಮಗಳು ಜರಗಿದವು.
Related Articles
Advertisement
ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಇದರ ಉಪಾಧ್ಯಕ್ಷ ರವಿ ಜಿ. ಆಚಾರ್ಯ, ಜತೆ ಕಾರ್ಯದರ್ಶಿಗಳಾದ ಗಣೇಶ್ ಕುಮಾರ್, ಹರೀಶ್ ಜಿ. ಆಚಾರ್ಯ, ಕೋಶಾಧಿಕಾರಿ ಬಾಬುರಾಜ್ ಎಂ. ಆಚಾರ್ಯ, ಜತೆ ಕೋಶಾಧಿಕಾರಿ ಸುಧೀರ್ ಜೆ. ಆಚಾರ್ಯ ಅವರು ಉಪಸ್ಥಿತರಿದ್ದರು.
ಕಾರ್ಯಕಾರಿ ಸಮಿತಿಯ ಸದಸ್ಯರಾದ ಜಿ. ಟಿ. ಆಚಾರ್ಯ, ನಿಟ್ಟೆ ದಾಮೋದರ ಆಚಾರ್ಯ, ಚಂದ್ರ ಯು. ಆಚಾರ್ಯ, ಪ್ರಭಾಕರ ಆಚಾರ್ಯ, ಮಧುಕರ ಆಚಾರ್ಯ, ಬಿ. ರಾಮದಾಸ್ ಆಚಾರ್ಯ, ಪ್ರದೀಪ್ ಆರ್. ಆಚಾರ್ಯ, ರಮೇಶ್ ಎ. ಆಚಾರ್ಯ, ಉಪೇಂದ್ರ ಎ. ಆಚಾರ್ಯ, ಶೈಕ್ಷಣಿಕ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಮೋಹನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶುಭಾ ಎಸ್. ಆಚಾರ್ಯ, ಉಪ ಕಾರ್ಯಾಧ್ಯಕ್ಷೆ ಉಷಾ ಜಿ. ಆಚಾರ್ಯ, ಸಂಚಾಲಕರಾದ ಕಲ್ಪನಾ ಸಿ. ಆಚಾರ್ಯ, ಮಂಜುಳಾ ಆರ್. ಆಚಾರ್ಯ, ಯುವ ವಿಭಾಗದ ರಾಜೇಶ್ ಎಸ್. ಆಚಾರ್ಯ, ಸಂದೇಶ್ ಆಚಾರ್ಯ, ರಾಜೇಶ್ ಎ. ಆಚಾರ್ಯ, ಭವ್ಯಾ ಆಚಾರ್ಯ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಕೊನೆಯಲ್ಲಿ ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಸಮಾಜ ಬಾಂಧವರು ಅನ್ನಸಂತರ್ಪಣೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ವಿವಿಧ ಸಂಘ-ಸಂಸ್ಥೆಗಳ ಪದಾಧಿ ಕಾರಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ತುಳು-ಕನ್ನಡಿಗರು, ಸಮಾಜ ಸೇವ ಕರು, ರಾಜಕೀಯ ಧುರೀಣರು, ಸಮಾಜದ ಗಣ್ಯರು ಪ್ರಸಾದ ಸ್ವೀಕರಿಸಿದರು.
ಚಿತ್ರ-ವರದಿ: ಸುಭಾಷ್ ಶಿರಿಯಾ