Advertisement

ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್‌  ಸದಸ್ಯೆಯರಿಂದ ಭಜನೆ 

10:20 AM Feb 16, 2018 | |

ಮುಂಬಯಿ: ಕರ್ನಾಟಕ ವಿಶ್ವಕರ್ಮ ಅಸೋಸಿ ಯೇಶನ್‌ ಮುಂಬಯಿ ಇದರ ಡೊಂಬಿವಲಿ ಪರಿಸರದ ಮಹಿಳೆಯರಿಂದ ಪ್ರಥಮ ಭಜನ ವಾರ್ಷಿಕೋತ್ಸವವು ಇತ್ತೀಚೆಗೆ ಡೊಂಬಿವಲಿ ಪಶ್ಚಿಮದ ಜಾನಕೀ ಬಾಯಿ ಸಭಾಗೃಹದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಪುರೋಹಿತ ಗೋಪಾಲಕೃಷ್ಣ ಆಚಾರ್ಯ ಅವರು ಪ್ರಾರ್ಥನೆಗೈದರು. ಜ್ಯೋತಿ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಸಂಘದ ಉಪಾಧ್ಯಕ್ಷರಾದ ರವೀಶ್‌ ಜಿ. ಆಚಾರ್ಯ, ಜನಾರ್ದನ ವಿ. ಆಚಾರ್ಯ, ಎಂ. ವಿ. ಆಚಾರ್ಯ, ಶ್ರೀನಿವಾಸ ಆಚಾರ್ಯ, ಸುನೀತಾ ಶಿವರಾಮ್‌ ಶೆಟ್ಟಿ, ನೇತ್ರಾ ಚಂದ್ರಶೇಖರ್‌ ಆಚಾರ್ಯ ಅವರು ಚಾಲನೆ ನೀಡಿದರು.

ಭಜನ ಕಾರ್ಯಕ್ರಮದಲ್ಲಿ ಡೊಂಬಿವಲಿ ವಿಶ್ವಕರ್ಮ ಮಹಿಳಾ ಬಳಗ ಡೊಂಬಿವಲಿ ಪಶ್ಚಿಮ ವಿಭಾಗ ನವರಾತ್ರಿ ಉತ್ಸವ ಮಂಡಳಿಯ ಮಹಿಳಾ ವಿಭಾಗ, ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್‌ ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಜೈ ವಿಶ್ವಕರ್ಮ ಭಜನ ವೃಂದ ಹಾಗೂ ಸಂಸ್ಥೆಯ ಗೋರೆಗಾಂವ್‌, ಬೊರಿವಲಿ ಪ್ರಾದೇಶಿಕ ಸಮಿತಿಗಳು ಭಾಗವಹಿಸಿದ್ದವು.

ವೇದಿಕೆಯಲ್ಲಿ ಡೊಂಬಿವಲಿ ಮಹಿಳಾ ವಿಶ್ವಕರ್ಮ ಅಸೋಸಿಯೇಶನ್‌ ಅಧ್ಯಕ್ಷ ಕಲ್ಯಾಣು³ರ ಸದಾನಂದ ಆಚಾರ್ಯ, ಮುಖ್ಯ ಅತಿಥಿಯಾಗಿ ಪಶ್ಚಿಮ ವಿಭಾಗ ನವರಾತ್ರಿ ಉತ್ಸವ ಮಂಡಳಿಯ ಧರ್ಮದರ್ಶಿ ಅಶೋಕ್‌ ದಾಸು ಶೆಟ್ಟಿ, ಜಿ. ಟಿ. ಆಚಾರ್ಯ, ಜನಾರ್ಧನ ಆಚಾರ್ಯ, ವಿಜಯ ಎಸ್‌. ಆಚಾರ್ಯ, ನೇತ್ರಾ ಚಂದ್ರಶೇಖರ್‌ ಆಚಾರ್ಯ, ಸುನೀತಾ ಶಿವರಾಮ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಮುಖ್ಯ ಅತಿಥಿ ಧರ್ಮದರ್ಶಿ ಅಶೋಕ್‌ ದಾಸು ಶೆಟ್ಟಿ ಇವರು ಮಾತನಾಡಿ, 
ಜಗತ್ತಿನ ಪಾಶ್ಚಿಮಾತ್ಯ ಭಾಷೆಯ ಎದುರಿನಲ್ಲಿ ಅಳಿಯುತ್ತಿರುವ ನಮ್ಮ ಭಜನೆ, ಇತ್ಯಾದಿಗಳನ್ನು ದಿನನಿತ್ಯ ಬಳಸುವಂತಹ ಪ್ರಯತ್ನವನ್ನು ಮಾಡಬೇಕು ಎಂದರು. ಸುನೀತಾ ಎಸ್‌. ಶೆಟ್ಟಿ ಅವರು ಸಮ್ಮಾನ ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದರು.

Advertisement

ಜೈ ವಿಶ್ವಕರ್ಮ ಭಜನ ವೃಂದದ ಸದಸ್ಯೆ ಶ್ರೀಮತಿ ಕೆ. ಆಚಾರ್ಯ ಅವರು ಮಾತನಾಡಿ, ಪಾಶ್ಚಾತ್ಯ ಭಾಷೆಯನ್ನು ಅಳವಡಿಸಿಕೊಂಡು ಬರುತ್ತಿರುವ ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿ, ಧಾರ್ಮಿಕತೆಯ ಅಡಿಪಾಯವನ್ನು ಹೊಂದಿಸುವ ಭಜನೆಯ ಮುಖೇನ ತಿಳಿ ಹೇಳಬೇಕು. ನಮ್ಮ ತಾಯ್ನಾಡಿನ ಮಣ್ಣಿನ ಪರಂಪರೆಯನ್ನು ಜೀವಂತವಾಗಿಡಲು ಭಜನೆಯ ಮೂಲಕ ಪ್ರಯತ್ನಿಸಬೇಕು ಎಂದರು. ಜಿ. ಟಿ. ಆಚಾರ್ಯ ಅವರು ಮಾತನಾಡಿ, ಭಜನೆಯನ್ನು ಹಾಡುವಾಗ ಅದನ್ನು ಅರ್ಥಮಾಡಿಕೊಂಡು ಹಾಡಿದರೆ ಸಾರ್ಥಕತೆಯನ್ನು ಪಡೆಯಬಹುದು ಎಂದರು.

ಡೊಂಬಿವಲಿ ಮಹಿಳಾ ವಿಶ್ವಕರ್ಮ ಅಸೋಸಿಯೇಶನ್‌ ಅಧ್ಯಕ್ಷ ಕಲ್ಯಾಣಪುರ ಸದಾನಂದ ಆಚಾರ್ಯ ಅವರು ಮಾತನಾಡಿ, ಡೊಂಬಿವಲಿ ಮತ್ತು ಪರಿಸರದ ವಿಶ್ವಕರ್ಮ ಮಹಿಳೆಯರು ಹಮ್ಮಿಕೊಂಡಂತಹ ಈ ಕಾರ್ಯಕ್ರಮವನ್ನು ಕಂಡಾಗ ಸಂತೋಷವಾಗುತ್ತಿದೆ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಲಿ ಎಂದರು. ಪವಿತ್ರಾ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಪ್ರಭಾಕರ ಎಸ್‌. ಆಚಾರ್ಯ ಅವರು ಸಭಾ ಕಾರ್ಯಕ್ರಮ ನಿರ್ವಹಿಸಿದರು. ಕು| ಭಾರತಿ ಚಂದ್ರಶೇಖರ್‌ ಆಚಾರ್ಯ ವಂದಿಸಿದರು. ಕೊನೆಯಲ್ಲಿ ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next