Advertisement
ಕೇಂದ್ರ ಸರಕಾರ ದಿಲ್ಲಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ “ಸೆಂಟ್ರಲ್ ವಿಸ್ತಾ’ದಲ್ಲಿ ಪ್ರಜಾಪ್ರಭುತ್ವದ ಮೂಲ ನೆಲೆ ಗಳನ್ನು ಪ್ರತಿಷ್ಠಾಪಿಸಲು ಮತ್ತು ದೇಸಿ ತನದ ಗಟ್ಟಿ ನೆಲೆಗಳನ್ನು ಕಟ್ಟಿಕೊಡಲು ಯೋಜಿಸಲಾಗಿದೆ. ಇದಕ್ಕೆ ಪೂರಕವಾಗಿರುವ ಅಗತ್ಯ ದಾಖಲೆಗಳು ಮತ್ತು ಆಧಾರಗಳನ್ನು ಪೂರೈಸುವಂತೆ ಕರ್ನಾಟಕ ವಿವಿಗೆ ಕೇಂದ್ರ ಸಂಸ್ಕೃತಿ ಸಚಿವಾಲಯದ ಅಧೀನ ಸಂಸ್ಥೆ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಆಡಳಿತ ನಿರ್ದೇಶಕರು ಕಳೆದ ಜುಲೈ ತಿಂಗಳಲ್ಲಿ ಪತ್ರ ಬರೆದು ಮಾಹಿತಿ ಕೇಳಿದ್ದರು.
ಪ್ರಧಾನಿ ನರೇಂದ್ರ ಮೋದಿ ಅನೇಕ ಬಾರಿ ಸಂಸತ್ತು, ಪ್ರಜಾಪ್ರಭುತ್ವ ವ್ಯವಸ್ಥೆ ವಿಚಾರ ಬಂದಾಗಲೆಲ್ಲ ಬಸವಣ್ಣ ಮತ್ತು ಅವರು ಸ್ಥಾಪಿಸಿದ “ಅನುಭವ ಮಂಟಪ’ವೇ ವಿಶ್ವದ ಮೊದಲ ಸಂಸತ್ತು ಎಂದು ವ್ಯಾಖ್ಯಾನಿಸುತ್ತಲೇ ಬಂದಿದ್ದಾರೆ. ವಿಧಾನ ಪರಿಷತ್ ಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿ ಅವರು ಅಧಿಕೃತವಾಗಿ “ಸೆಂಟ್ರಲ್ ವಿಸ್ತಾ’ಕ್ಕೆ ಅನುಭವ ಮಂಟಪ ಎಂದು ಹೆಸರಿಡುವಂತೆ ಮನವಿ ಸಲ್ಲಿಸಿದ್ದಾರೆ. ಈಗ “ಸೆಂಟ್ರಲ್ ವಿಸ್ತಾ’ದಲ್ಲಿ “ಅನುಭವ ಮಂಟಪ’ ಮಾದರಿ ಸ್ಥಾಪಿಸಲು ಸ್ವತಃ ಪ್ರಧಾನಿ ಮೋದಿ ಅವರೇ ಆಸಕ್ತಿ ವಹಿಸಿದ್ದಾರೆ ಎನ್ನಲಾಗಿದೆ.
Related Articles
-ಡಾ| ವೀರಣ್ಣ ರಾಜೂರ, ಹಿರಿಯ ಸಂಶೋಧಕರು.
Advertisement
ಅನುಭವ ಮಂಟಪವೇ ಪ್ರಜಾಪ್ರಭುತ್ವದ ಮೂಲ ಬುನಾದಿ ಎಂಬುದಕ್ಕೆ ಸಾಕ್ಷಿಯಾಗಿರುವ ತಾಳೆಗರಿ ದಾಖಲೆಗಳು, ಪೂರಕವಾದ ಶರಣರ ವಚನಗಳು ಸೇರಿ ಅಗತ್ಯ ದಾಖಲೆಗಳನ್ನು ನಮ್ಮ ಸಂಶೋಧಕರ ತಂಡ ಅಚ್ಚುಕಟ್ಟಾಗಿ ಸಂಗ್ರಹಿಸಿದೆ. ಕಳೆದ ಸೆ.30ರಂದೇ ಕೇಂದ್ರ ಸರಕಾರಕ್ಕೆ ವಿಶ್ವದ ಮೊದಲ ಸಂಸತ್ ಮತ್ತು ಪ್ರಜಾಪ್ರಭುತ್ವ ಮಾದರಿ “ಅನುಭವ ಮಂಟಪ’ದ ದಾಖಲೆ ಸಲ್ಲಿಸಿದ್ದೇವೆ.-ಡಾ| ಕೆ.ಬಿ. ಗುಡಸಿ, ಕುಲಪತಿಗಳು, ಕವಿವಿ-ಧಾರವಾಡ. -ಡಾ| ಬಸವರಾಜ್ ಹೊಂಗಲ್