Advertisement

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕುಂದಾಪುರ ಸಾಮಾನ್ಯ ಸಭೆ

01:40 AM Jul 11, 2017 | Harsha Rao |

ಕುಂದಾಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ.) ತಾಲೂಕು ಶಾಖೆ ಕುಂದಾಪುರ  ಇವರ ಸಾಮಾನ್ಯ ಸಭೆ ಇಲ್ಲಿನ ಚಿಕನ್‌ ಸಾಲ್‌ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು.

Advertisement

ಸಭೆಯಲ್ಲಿ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಕುಂದಾಪುರ ಪುರಸಭಾ ವ್ಯಾಪ್ತಿ ಯಲ್ಲಿರುವ ಮುದ್ದು ಗುಡ್ಡೆಯಲ್ಲಿರುವ ದಲಿತ ಕುಟುಂಬದ ಸಮಸ್ಯೆ,  ಕಡ್ಗಿ ರಸ್ತೆ ಹೊಸಬೆಟ್ಟು ದಲಿತ ನಿವಾಸಿಗಳ ಸಮಸ್ಯೆ,  ಪೆರಿ ರಸ್ತೆಯ ದಲಿತ ನಿವಾಸಿಗಳ ಸಮಸ್ಯೆಯನ್ನು ಬಗೆಹರಿಸಲು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದು ಪರಿಹರಿಸಲು ನಿರ್ಣಯಿಸ ಲಾಯಿತು. ಕುಂದಾಪುರ ತಾಲೂಕಿನ ಅಕ್ರಮ ಮದ್ಯ ಮಾರುವವರ  ವಿರುದ್ಧ   ಮತ್ತು ಎಲ್ಲೆಂದರಲ್ಲಿ ಶಾಲಾ ಕಾಲೇಜುಗಳ ಸಮೀಪ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮನೆ ಸಮೀಪ ಈಗ ತೆರೆದಿರುವ ಮತ್ತು ಹೊಸದಾಗಿ ತೆರೆಯಲು ಉದ್ದೇಶವಿರುವ ಮದ್ಯ ದಂಗಡಿಗಳನ್ನು ತೆರೆಯದಂತೆ  ಕಾನೂನಾತ್ಮಕ ಹೋರಾಟ ಮಾಡಲು ನಿರ್ಣಯಿಸಲಾಯಿತು.

ದಲಿತ ವಿರೋಧಿ ನೀತಿಗಳನ್ನು ಅನುಕರಿಸುವ ಸಂಸ್ಥೆಗಳ ವಿರುದ್ಧ ದಲಿತ ದೌರ್ಜನ್ಯ ಕಾಯಿದೆ ಅಡಿಯಲ್ಲಿ ದೂರು ದಾಖಲಿಸಲು ಸಭೆಯಲ್ಲಿ  ನಿರ್ಣಯಿಸಲಾಯಿತು.

ಸಭೆಯಲ್ಲಿ ದ.ಸಂ.ಸ. ಕುಂದಾಪುರ ತಾಲೂಕು ಸಂಚಾಲಕ ಕೆ.ಸಿ. ರಾಜು ಬೆಟ್ಟಿನ ಮನೆ, ದ.ಸಂ.ಸ. ಜಿಲ್ಲಾ ನಾಯಕ ಮಂಜುನಾಥ ಗಿಳಿಯಾರು, ಸುರೇಶ್‌ ಬಾಕೂìರು, ತಾಲೂಕು ಸಂಘಟನ ಸಂಚಾಲಕ ಪ್ರಭಾಕರ್‌ ವಿ., ಗಿರೀಶ್‌ ಕುಮಾರ್‌ ಜಿ., ಮಂಜುನಾಥ ಕೆ., ಗಂಗಾಧರ ಜಿ., ಮಂಜುನಾಥ ನಾಗೂರು, ತಾಲೂಕು ಮಹಿಳಾ ಒಕ್ಕೂಟದ ಸಂಘಟನಾ ಸಂಚಾಲಕಿ ನಯನಾ ಎ., ಸೀತಾ ಕೆ., ದ.ಸಂ.ಸ. ಗ್ರಾಮ ಶಾಖೆಯ ಸಂಚಾಲಕರಾದ ಹರೀಶ್‌ ಕೆರಾಡಿ, ಆನಂದ ಹಲೂ¤ರು,ರವಿ ಸುಣ್ಣಾರಿ, ಅಣ್ಣಪ್ಪ ಬಿ.ಎಂ. ಹರೀಶ್‌ ಅನಗಳ್ಳಿ, ವೀರಭದ್ರ ಕೆ., ತಿಮ್ಮ ಪಿ., ಉಮೇಶ್‌ ಎಚ್‌. ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next