ಬೆಂಗಳೂರು ; ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ ಇಂದು ಒಂದೇ ದಿನ 416 ಹೊಸ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ, ಇದರೊಂದಿಗೆ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 8697ಕ್ಕೆ ಏರಿಕೆಯಾಗಿದೆ.
ಬೆಂಗಳೂರು ನಗರದಲ್ಲಿ 94 ಪ್ರಕರಣಗಳು, ಬೀದರ್ ನಲ್ಲಿ 73 ಪ್ರಕರಣಗಳು , ಬಳ್ಳಾರಿಯಲ್ಲಿ 38 ಪ್ರಕರಣಗಳು, ರಾಮನಗರದಲ್ಲಿ 38 ಪ್ರಕರಣಗಳು, ಕಲಬುರ್ಗಿ 34 ಪ್ರಕರಣಗಳು , ಮೈಸೂರಿನಲ್ಲಿ 22 ಪ್ರಕರಣ , ಹಾಸನ 16 ಪ್ರಕರಣಗಳು, ರಾಯಚೂರು 15, ಉಡುಪಿ 13 ಪ್ರಕರಣಗಳು ಹಾಗೂ ಹಾವೇರಿಯಲ್ಲಿ 12 ಪ್ರಕರಣಗಳು ದೃಢಪಟ್ಟಿವೆ.
ಇಂದು ರಾಜ್ಯದಲ್ಲಿ ಒಟ್ಟು 181 ಮಂದಿ ಬಿಡುಗಡೆಗೊಂಡಿದ್ದಾರೆ ಇದರೊಂದಿಗೆ ರಾಜ್ಯದಲ್ಲಿ ಒಟ್ಟು 5391 ಮಂದಿ ಗುಣಮುಖರಾಗಿ ಆಸ್ಪತ್ರಯಿಂದ ಬಿಡುಗಡೆಗೊಂಡಿದ್ದಾರೆ,
ಇಂದು ರಾಜ್ಯದಲ್ಲಿ ಒಟ್ಟು 09 ಮಂದಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದು ಇದರೊಂದಿಗೆ ರಾಜ್ಯದಲ್ಲಿ ಒಟ್ಟು 132 ಮಂದಿ ಸಾವನ್ನಪ್ಪಿದ್ದಾರೆ.
ಇಂದಿನ 416 ಹೊಸ ಪ್ರಕರಣ ಸೇರಿ ಒಟ್ಟು 3170 ಪ್ರಕರಣಗಳು ಸಕ್ರೀಯವಾಗಿವೆ.