Advertisement
ಪಂಚಸೂತ್ರದಡಿ ಆರು ವಲಯಗಳನ್ನು ವಿಂಗಡಿಸಿಕೊಂಡು ಕೃಷಿ, ಆರೋಗ್ಯ, ಶಿಕ್ಷಣ, ನೀರಾವರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆಯಾದರೂ ಅನುದಾನ ಹಂಚಿಕೆ ಬಜೆಟ್ ಪುಸ್ತಕದಲ್ಲಿ ಹೇಳಿದಷ್ಟು ಸುಲಭವಲ್ಲ. ಆದರೂ ಮೊದಲ ಬಜೆಟ್‌ನಲ್ಲಿ ಎಲ್ಲರನ್ನೂ ಎಲ್ಲವನ್ನೂ ಸರಿದೂಗಿಸುವ ಕಸರತ್ತು ಮಾಡಿದ್ದಾರೆ.
Related Articles
Advertisement
ಗ್ರಾಮೀಣ ರೈತರಿಗೆ ಆರೋಗ್ಯ ಸೇವೆ ಒದಗಿಸಲು ಈ ಹಿಂದೆ ಆರಂಭಿ ಸಿದ್ದ ಯಶಸ್ವಿನಿ ಯೋಜನೆ ಪರಿಷ್ಕೃತ ರೂಪದಲ್ಲಿ ಮರು ಜಾರಿಗೊಳಿಸುವ ತೀರ್ಮಾನ ಒಳ್ಳೆಯದು. ಏಕೆಂದರೆ ಯಶಸ್ವಿನಿ ತುಂಬಾ ಒಳ್ಳೆಯ ಯೋಜನೆಯಾಗಿತ್ತು. ರೈತಾಪಿ ಸಮುದಾಯಕ್ಕೆ ಸಾಕಷ್ಟು ಅನುಕೂಲ ವಾಗಿತ್ತು. ರೈçತರಿಗೆ ಸಹಾಯಧನ ನೀಡುವ “ರೈತ ಶಕ್ತಿ’, ಗೋವು ದತ್ತು ಪಡೆಯುವ “ಪುಣ್ಯಕೋಟಿ’ ಮೀನುಗಾರರಿಗೆ ಅನುಕೂಲವಾಗುವ “ಮತ್ಸ Â ಸಿರಿ’, ವಿದ್ಯಾರ್ಥಿಗಳಿಗೆ ಪೂರಕವಾಗುವ “ಮುಖ್ಯಮಂತ್ರಿ ವಿದ್ಯಾರ್ಥಿ ಮಾರ್ಗದರ್ಶಿನಿ’ ಗ್ರಾಮೀಣ ಜನರ ಮನೆ ಬಾಗಿಲಿಗೆ ವೈದ್ಯಕೀಯ ಸೇವೆ ಕಲ್ಪಿಸುವ “ಮುಖ್ಯಮಂತ್ರಿ ಆರೋಗ್ಯ ವಾಹಿನಿ’ ಎಸ್‌ಸಿ-ಎಸ್‌ಟಿ, ಹಿಂದುಳಿದ ಅಲ್ಪಸಂಖ್ಯಾಕ ಮಕ್ಕಳ ಉನ್ನತ ಶಿಕ್ಷಣ ಪ್ರೋತ್ಸಾಹಿಸುವ “ದೀನದಯಾಳ್ ಉಪಾಧ್ಯಾಯ ಸೌಹಾರ್ದ ವಿದ್ಯಾ ರ್ಥಿನಿಲಯ’ ಹಿಂದುಳಿದ ವರ್ಗಗಳ ಯುವಕರಿಗೆ ಕೌಶಲ ತರಬೇತಿ ನೀಡಿ ಉದ್ಯೋಗ ಕಲ್ಪಿಸುವ “ಅಮೃತ ಮುನ್ನಡೆ’ ಎಂಬ ಹೊಸ ಯೋಜನೆಗಳು ರಾಜ್ಯದ ಜನತೆಯಲ್ಲಿ ಭರವಸೆ ಮೂಡಿಸುವಂತಿದೆ. ಹಾಲು ಉತ್ಪಾದಕರಿಗೆ ಸಾಲ ಒದಗಿಸಲು ಕ್ಷೀರ ಸಹಕಾರ ಬ್ಯಾಂಕ್ ಸ್ಥಾಪನೆ ನಿಜಕ್ಕೂ ಅಗತ್ಯವಾಗಿತ್ತು. ಒಟ್ಟಾರೆ, ಸಂಪನ್ಮೂಲ ಕ್ರೋಡೀಕರಣದ ಸವಾ ಲಿನ ನಡುವೆಯೂ ಇರುವ ಅವಕಾಶದಲ್ಲೇ ಉತ್ತಮ ಬಜೆಟ್ ನೀಡಲು ಸಿಎಂ ಪ್ರಯತ್ನಿಸಿದ್ದಾರೆ. ಆದರೆ, ಈ ಬಜೆಟ್ ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿರಬಾರದು. ಇದಕ್ಕೆ ಬದಲಾಗಿ ಜಾರಿಗೂ ಅಷ್ಟೇ ಪ್ರಾತಿನಿಧ್ಯ ನೀಡಬೇಕಾದದ್ದು ಸರಕಾರದ ಕರ್ತವ್ಯವಾಗಿದೆ.