Advertisement
ಶುಕ್ರವಾರ ಬಂದಿಳಿದ ಅಗರ್‌ವಾಲ್ ಅವ ರನ್ನು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಬರ ಮಾಡಿ ಕೊಂಡರು. ನಗರದ ಕುಮಾರ ಕೃಪಾ ಅತಿಥಿಗೃಹಕ್ಕೆ ಅಗರ್‌ವಾಲ್ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಹೂಗುತ್ಛ ನೀಡಿ, ಜೈಕಾರ ಕೂಗಿದರು. ಬಳಿಕ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿ ಹಲವು ನಾಯಕರು ಭೇಟಿಯಾದರು.
ಅಪರಾಹ್ನ 3 ಗಂಟೆಗೆ ಕೋರ್ ಕಮಿಟಿ ಸಭೆ ನಡೆಯಲಿದ್ದು, ಮೂರು ಉಪಚುನಾವಣೆಗಳ ಸೋಲಿನ ಬಗ್ಗೆ ಪರಾಮರ್ಶೆ ನಡೆಯಲಿದೆ.
Related Articles
Advertisement
ಬಣ ರಾಜಕಾರಣಕ್ಕೆ ತಡೆ?ಬಿಜೆಪಿಯಲ್ಲಿ ಸದ್ಯ ವಿಜಯೇಂದ್ರ ಬಣ, ಬಸನಗೌಡ ಪಾಟೀಲ್ ಯತ್ನಾಳ್ ಬಣ ಹಾಗೂ ಎರಡೂ ಬಣದ ಜತೆ ಗುರುತಿಸಿಕೊಳ್ಳದ ತಟಸ್ಥ ಬಣಗಳಿವೆ. ಈ ಮೂರೂ ಬಣಗಳಿಗೆ ಸ್ಪಷ್ಟ ಸಂದೇಶವನ್ನು ಉಸ್ತುವಾರಿ ಅಗರ್‌ವಾಲ್ ನೀಡುವ ಸಾಧ್ಯತೆಗಳಿವೆ. ಆದರೆ ಯತ್ನಾಳ್ ಅವರ ವಿರುದ್ಧ ನಿಲ್ಲುವ ಭರದಲ್ಲಿ ಪಕ್ಷದ ಆಂತರಿಕ ವಿಚಾರವನ್ನು ಸಾರ್ವಜನಿಕವಾಗಿ ಮಾತನಾಡಿರುವ ವಿಜಯೇಂದ್ರ ಬಣದ ವಿರುದ್ಧ ಕ್ರಮ ಆಗಿಲ್ಲ ಎಂಬ ಅಸಮಾಧಾನಗಳಿವೆ. ಈ ವಿಚಾರವೂ ಸಭೆಯಲ್ಲಿ ಚರ್ಚೆಗೆ ಬರಬಹುದಾಗಿದ್ದು, ಮಾಜಿ ಸಿಎಂ ಡಿ.ವಿ. ಸದಾನಂದ ಗೌಡರು ಪಕ್ಷ ಶುದ್ಧೀಕರಣದ ವಿಷಯವನ್ನು ಸಭೆಯ ಮುಂದಿಡುವ ಸಂಭವವಿದೆ. ಎಲ್ಲರ ಅಹವಾಲು ಆಲಿಸಿ, ಪರಿಹಾರ ಸೂತ್ರವೊಂದನ್ನು ರಾಧಾಮೋಹನ್ ಅಗರ್‌ವಾಲ್ ನೀಡುವ ನಿರೀಕ್ಷೆಯಲ್ಲಿ ಕಾರ್ಯಕರ್ತರಿದ್ದಾರೆ.