Advertisement

ಸಚಿವ ಅಶೋಕ್‌ ವಾಸ್ತವ್ಯ: ಕಳೆಗಟ್ಟಿದ ಮಾಚನಾಳ ತಾಂಡಾ

12:32 AM Jan 18, 2023 | Team Udayavani |

ಕಲಬುರಗಿ: ದಕ್ಷಿಣ ಮತಕ್ಷೇತ್ರದ ಮಾಚನಾಳ ತಾಂಡಾದಲ್ಲಿ ಕಂದಾಯ ಸಚಿವ ಆರ್‌. ಅಶೋಕ್‌ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ನಾನಾ ಕಲಾ ತಂಡಗಳು ತಮ್ಮ ಕಲೆ ಪ್ರರ್ದಶಿಸುವ ಮೂಲಕ ಊರು ಅಭಿಮಾನದ ಹೊಳೆಯಲ್ಲಿ ತೇಲಿತು. ಮಾಚನಾಳ ಗ್ರಾಮಸ್ಥರಿಂದ ಜೆಸಿಬಿ ಮೂಲಕ ಹೂವಿನ ಸುರಿಮಳೆಗೈಯಲಾಯಿತು. ಇದೇ ವೇಳೆ ಗ್ರಾಮದ ಯುವಕರು ಹಾಗೂ ಬಿಜೆಪಿ ಕಾರ್ಯಕರ್ತರು ನೂರಕ್ಕೂ ಹೆಚ್ಚಿನ ಬೈಕ್ ರ‍್ಯಾಲಿ ಮುಖಾಂತರ ಕರೆತರಲಾಯಿತು.

Advertisement

ಎತ್ತಿನ ಬಂಡಿಯಲ್ಲಿ ಮೆರವಣಿಗೆ
ಸಂಜೆ ಮಾಚನಾಳ ಗ್ರಾಮಕ್ಕೆ ಆಗಮಿಸಿದ ಕಂದಾಯ ಸಚಿವ ಆರ್‌. ಅಶೋಕ್‌ ಅವರನ್ನು ಸಿಂಗರಿಸಿದ ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮೂಲಕ ಗ್ರಾಮದಲ್ಲಿ ಬರಮಾಡಿಕೊಳ್ಳಲಾಯಿತು. ಅವ ರಿಗೆ ಲಂಬಾಣಿ ಸಂಪ್ರದಾ ಯದ ಕವಡೆ ಹಾರ ಹಾಕಿ ಸ್ವಾಗತಿಸಲಾಯಿತು.

ಇದೇ ವೇಳೆ ನೂರಾರು ಮಹಿಳೆಯರು ಪೂರ್ಣ ಕುಂಭ ದೊಂದಿಗೆ ಸ್ವಾಗತಿಸಲಾ ಯಿತು. ಯುವಕರು ನಾನಾ ಘೋಷಣೆ ಕೂಗುವ ಮೂಲಕ ಸಚಿವರನ್ನು ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷ, ಶಾಸಕ ದತ್ತಾತ್ರೇಯ ಪಾಟೀಲ್‌ ರೇವೂರ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ, ಕುಡಚಿ ಶಾಸಕ ಪಿ. ರಾಜೀವ್‌ ಸೇರಿ ಅಧಿಕಾರಿಗಳನ್ನು ಬರಮಾಡಿಕೊಂಡರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next