Advertisement
ಹತ್ತನೇ ತರಗತಿಯ ಪರೀಕ್ಷೆಯಲ್ಲಿ ರಾಜ್ಯದ ವಿದ್ಯಾರ್ಥಿಗಳು ಶೇ. 99.83 ಮತ್ತು ಹನ್ನೆರಡನೇ ತರಗತಿ ಪರೀಕ್ಷೆಯಲ್ಲಿ ಶೇ. 99.49 ಫಲಿತಾಂಶ ಪಡೆದಿದ್ದಾರೆ.
ಎರಡೂ ಪರೀಕ್ಷೆಯಲ್ಲೂ ವಿದ್ಯಾರ್ಥಿನಿ ಯರೇ ಮೇಲುಗೈ ಸಾಧಿಸಿದ್ದಾರೆ. ಐಸಿಎಸ್‌ಇಯಲ್ಲಿ ಶೇ.99.93 ಬಾಲಕಿಯರು ಹಾಗೂ ಶೇ.99.73 ಬಾಲಕರು ತೇರ್ಗಡೆ ಆಗಿದ್ದಾರೆ. ಐಎಸ್‌ಸಿಯಲ್ಲಿ ಬಾಲಕಿಯರು ಶೇ.99.76 ಮತ್ತು ಬಾಲಕರು ಶೇ.99.18 ಉತ್ತೀರ್ಣರಾಗಿದ್ದಾರೆ.
Related Articles
Advertisement
ಐಸಿಎಸ್‌ಇ ಪರೀಕ್ಷೆಯನ್ನು 20 ಭಾರತೀಯ ಭಾಷೆಗಳು ಸಹಿತ ಒಟ್ಟು 60 ವಿಷಯಗಳಲ್ಲಿ ನಡೆಸಲಾಗಿತ್ತು. ಇದರಲ್ಲಿ 13 ವಿದೇಶಿ ಮತ್ತು 1 ಕ್ಲಾಸಿಕಲ್ ಭಾಷೆ ಕೂಡ ಸೇರಿದೆ. ಅದೇ ರೀತಿ ಐಎಸ್‌ಸಿ ಪರೀಕ್ಷೆಯನ್ನು 47 ವಿಷಯಗಳಲ್ಲಿ ನಡೆಸಿದ್ದು, ಇದರಲ್ಲಿ 12 ಭಾರತೀಯ, 4 ವಿದೇಶಿ ಮತ್ತು 2 ಕ್ಲಾಸಿಕಲ್ ಭಾಷೆ ಸೇರಿದೆ. 10ನೇ ತರಗತಿಗೆ ನೋಂದಾಯಿಸಿದ್ದ ವಿದ್ಯಾರ್ಥಿಗಳಲ್ಲಿ 47 ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ.
10ನೇ ತರಗತಿಯಲ್ಲಿ ಪರಿಶಿಷ್ಟ ಜಾತಿ 1,734 ವಿದ್ಯಾರ್ಥಿಗಳು ಹಾಗೂ ಪರಿಶಿಷ್ಟ ಪಂಗಡದ 395 ವಿದ್ಯಾರ್ಥಿಗಳು, ಹಿಂದುಳಿದ ವರ್ಗಕ್ಕೆ ಸೇರಿದ 11,693 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಅದೇ ರೀತಿ 12ನೇ ತರಗತಿಯಲ್ಲಿ 79 ಪರಿಶಿಷ್ಟ ಜಾತಿ ಮತ್ತು 26 ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ 326 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.