Advertisement

ದ್ವಿತೀಯ ಪಿಯುಸಿ ರಿಸಲ್ಟ್; ಟಾಪರ್ಸ್ಸ್ ನಲ್ಲಿ ಬಳ್ಳಾರಿಯೇ ಟಾಪ್…

09:16 AM Apr 16, 2019 | Nagendra Trasi |

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಇಂದು ಕಾಲೇಜ್ ನ ಕುಸುಮಾ ಉಜ್ಜಿನಿ 594 ಅಂಕ ಪಡೆಯುವ ಮೂಲಕ ಪ್ರಥಮ ಸ್ಥಾನ ಪಡೆದಿದ್ದಾರೆ.

Advertisement

ಅದೇ ರೀತಿ ಕೊಟ್ಟೂರಿನ ಇಂದು ಪಿಯು ಕಾಲೇಜಿನ ಕಲಾ ವಿಭಾಗದಲ್ಲಿ  ಹೊಸ್ಮನಿ ಚಂದ್ರಪ್ಪ 591 ಅಂಕ ಪಡೆದು ದ್ವಿತೀಯ ಸ್ಥಾನ, ಇಂದು ಪಿಯು ಕಾಲೇಜ್ ನ ನಾಗರಾಜ್ ಸಿದ್ದಪ್ಪಾ ಕಲಾವಿಭಾಗದಲ್ಲಿ ಮೂರನೇ (591) ಸ್ಥಾನ, ಇಂದು ಕಾಲೇಜ್ ನ ಒಮೇಶ್ ಎಸ್ ಕಲಾವಿಭಾಗದಲ್ಲಿ ನಾಲ್ಕನೇ (591) ಸ್ಥಾನ, ಇಂದು ಕಾಲೇಜಿನ ಸಚಿನ್ ಕೆಜಿ ಕಲಾವಿಭಾಗದಲ್ಲಿ ಐದನೇ (589) ಹಾಗೂ ಇಂದು ಕಾಲೇಜಿನ ಸುರೇಶ್ ಎಚ್ ಕಲಾವಿಭಾಗದಲ್ಲಿ ಆರನೇ ಸ್ಥಾನ (589) ಪಡೆದಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಪನಹಳ್ಳಿಯ ಎಸ್ ಯುಜೆಎಂ ಪಿಯು ಕಾಲೇಜಿನ ಬಾರಿಕಾರಾ ಶಿವಕುಮಾರ್ ಕಲಾವಿಭಾಗದಲ್ಲಿ 589 ಅಂಕ ಪಡೆದು ಏಳನೇ Rank, ಕೊಟ್ಟೂರಿನ ಇಂದು ಪಿಯು ಕಾಲೇಜಿನ ಎಚ್.ಹುಚ್ಚಂಗೆಮ್ಮಾ ಕಲಾವಿಭಾಗದಲ್ಲಿ (588) 8ನೇ Rank, ಕೊಟ್ಟೂರಿನ ಇಂದು ಪಿಯು ಕಾಲೇಜಿನ ಕೆಎಂ ನಂದೀಶಾ ಕಲಾವಿಭಾಗದಲ್ಲಿ (588) 9ನೇ Rank, ಕೊಟ್ಟೂರಿನ ಇಂದು ಪಿಯು ಕಾಲೇಜಿನ ಎ ಸರಸ್ವತಿ ಕಲಾವಿಭಾಗದಲ್ಲಿ ಹತ್ತನೇ(587) Rank ಪಡೆದಿದ್ದಾರೆ.

ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗ:

ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಫಲಿತಾಂಶದಲ್ಲಿ ದಕ್ಷಿಣ ಕನ್ನಡದ ಮೂಡಬಿದ್ರಿ ಆಳ್ವಾಸ್ ಪಿಯು ಕಾಲೇಜಿನ ಒಲ್ವಿಟಾ ಆನ್ ಸಿಲ್ಲಾ ಡಿಸೋಜಾ (596) ಟಾಪರ್ ಆಗಿದ್ದಾರೆ.

Advertisement

(ಆಳ್ವಾಸ್ ಪಿಯು ಕಾಲೇಜಿನ ಒಲ್ವಿಟಾ ಆನ್ ಸಿಲ್ಲಾ ಡಿಸೋಜಾ)

ಮಂಗಳೂರಿನ ಸತ್ಯಸಾಯಿ ಲೋಕಸೇವಾ ಪಿಯು ಕಾಲೇಜಿನ ಶ್ರೀಕೃಷ್ಣಾ ಶರ್ಮಾ ಕೆ (596) ಟಾಪರ್ ಆಗಿದ್ದಾರೆ. ಮಂಗಳೂರು ಕೊಡಿಯಾಲ್ ಬೈಲ್ ನ ಕೆನರಾ ಪಿಯು ಕಾಲೇಜಿನ ಶ್ರೇಯಾ ಶೆಣೈ (595) ವಾಣಿಜ್ಯ ವಿಭಾಗದಲ್ಲಿ ಟಾಪರ್ ಆಗಿದ್ದಾರೆ.

ದಕ್ಷಿಣ ಕನ್ನಡ ಪುತ್ತೂರಿನ ಸೈಂಟ್ ಫಿಲೋಮಿನಾ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ಸ್ವಸ್ತಿಕ್ ಪಿ (594) ನಾಲ್ಕನೇ Rank ಪಡೆಯುವ ಮೂಲಕ ಟಾಪರ್ ಆಗಿದ್ದಾರೆ. ಬೆಂಗಳೂರಿನ ಹೊಸೂರಿನ ಕ್ರೈಸ್ಟ್ ಪಿಯು ಕಾಲೇಜಿನ ಗೌತಮ್ ರಾಥಿ (594) 5ನೇ Rank ಗಳಿಸಿದ್ದಾರೆ.

ಬೆಂಗಳೂರಿನ ಬಸವನಗುಡಿ ಎಸ್ ಕಾಡಂಬಿ ಪಿಯು ಕಾಲೇಜಿನ ವೈಷ್ಣವಿ ಕೆ ವಾಣಿಜ್ಯ ವಿಭಾಗದಲ್ಲಿ (594) ಆರನೇ Rank ಪಡೆದು ಟಾಪರ್ ಆಗಿದ್ದಾರೆ. ತುಮಕೂರಿನ ವಿದ್ಯಾವಾಹಿನಿ ಪಿಯು ಕಾಲೇಜಿನ ಪ್ರಜ್ಞಾ ಸತೀಶ್ ವಾಣಿಜ್ಯ ವಿಭಾಗದಲ್ಲಿ (594) 7ನೇ Rank ಪಡೆದು ಟಾಪರ್ ಆಗಿದ್ದಾರೆ.

ಬೆಂಗಳೂರಿನ ಜಯನಗರ 9ನೇ ಬ್ಲಾಕ್ ನ ಜೈನ್ ಪಿಯು ಕಾಲೇಜಿನ ಬೀಮಿ ರೆಡ್ಡಿ ಸಂದೀಪ್ ರೆಡ್ಡಿ ವಾಣಿಜ್ಯ ವಿಭಾಗದಲ್ಲಿ (594) 8ನೇ Rank ಪಡೆದು ಟಾಪರ್ ಆಗಿದ್ದಾರೆ.

ಬೆಂಗಳೂರು ಪಿಯು ಕಾಲೇಜಿನ ಹೊಸೂರು ರಸ್ತೆಯ ಕ್ರೈಸ್ಟ್ ಪಿಯು ಕಾಲೇಜಿನ ಪ್ರಣವ್ ಎಸ್ ಶಾಸ್ತ್ರಿ ವಾಣಿಜ್ಯ ವಿಭಾಗದಲ್ಲಿ (594) 9ನೇ Rank ಪಡೆದಿದ್ದಾರೆ. ಬೆಂಗಳೂರು ವಿವಿ ಪುರಂನ ಎಸ್ ಬಿ ಮಹಾವೀರ್ ಜೈನ್ ಪಿಯು ಕಾಲೇಜಿನ ಶರಾವಂತಿ ಜಯಪಾಲ್ ವಾಣಿಜ್ಯ ವಿಭಾಗದಲ್ಲಿ (594) 10ನೇ Rank ಪಡೆದಿದ್ದಾರೆ.

ವಿಜ್ಞಾನ ವಿಭಾಗ:

ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಬೆಂಗಳೂರಿನ ಪದ್ಮನಾಭ್ ನಗರ ಬೃಂದಾವನದ ಕುಮಾರನ್ಸ್ ಪಿಯು ಕಾಲೇಜಿನ ರಜತ್ ಕಶ್ಯಪ್ (594) ಟಾಪರ್ ಆಗಿದ್ದಾರೆ.

ಮಲ್ಲೇಶ್ವರಂನಲ್ಲಿರುವ ವಿದ್ಯಾಮಂದಿರ್ ಪಿಯು ಕಾಲೇಜಿನ ವಿದ್ಯಾರ್ಥಿನಿ ದಿವ್ಯಾ ಕೆ. ವಿಜ್ಞಾನ ವಿಭಾಗದಲ್ಲಿ (593) ದ್ವಿತೀಯ Rank ಪಡೆದು ಟಾಪರ್ ಸ್ಥಾನ ಪಡೆದಿದ್ದಾರೆ.

ಬೆಂಗಳೂರು ಜಯನಗರದ ಆರ್ ವಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಪ್ರಿಯಾ ನಾಯಕ್ 593 ಅಂಕಗಳೊಂದಿಗೆ ಟಾಪರ್ ಆಗಿದ್ದಾರೆ.

ಕಾರ್ಕಳ ತಾಲೂಕಿನ ಹೆಬ್ರಿ ಕಿನ್ನಿಗುಡ್ಡೆಯ ಸರ್ ಪಿಯು ಕಾಲೇಜಿನ್ ರಾಯೀಶಾ ವಿಜ್ಞಾನ ವಿಭಾಗದಲ್ಲಿ 592 ಅಂಕಗಳೊಂದಿಗೆ ಟಾಪರ್ ಆಗಿದ್ದಾರೆ. ಹಾಸನ ಹೊಯ್ಸಳ ನಗರದ ಮಾಸ್ಟರ್ಸ್ಸ್ ಪಿಯು ಕಾಲೇಜಿನ ಡಿ.ನಿಕೇತನ್ ಗೌಡ 592 ಅಂಕ ಪಡೆದು ಟಾಪರ್ ಆಗಿದ್ದಾರೆ.

ದಕ್ಷಿಣ ಕನ್ನಡ ಪುತ್ತೂರಿನ ವಿವೇಕಾನಂದ ಪಿಯು ಕಾಲೇಜಿನ ವಿದ್ಯಾರ್ಥಿನಿ ಜಾಗೃತಿ ಜೆ.ನಾಯಕ್ ವಿಜ್ಞಾನ ವಿಭಾಗದಲ್ಲಿ 592 ಅಂಕ ಪಡೆದು ಟಾಪರ್ ಆಗಿದ್ದಾರೆ. ಉಡುಪಿಯ ಎಂಜಿಎಂ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸ್ವಾತಿ 592 ಅಂಕ ಪಡೆದು ಟಾಪರ್ ಆಗಿದ್ದಾರೆ.

ಬೆಳಗಾಂ ಜಿಲ್ಲೆಯ ತಿಲಕ್ ವಾಡಿಯ ಗೋವಿಂದ್ರಾಮ್ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಸತೀಶ್ ಶ್ರೀಕಾಂತ್ ಮೆಂಡ್ಕೆ 591 ಅಂಕ ಪಡೆದು ಟಾಪರ್ ಆಗಿದ್ದಾರೆ. ಬೆಂಗಳೂರು ರಾಜಾಜಿನಗರದ ಎಎಸ್ ಸಿ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಪಲ್ಲವಿ ಜಿ. 591 ಅಂಕ ಪಡೆದು ಟಾಪರ್ ಆಗಿದ್ದಾರೆ. ದಕ್ಷಿಣ ಕನ್ನಡ ಕೊಡಿಯಾಲ್ ಬೈಲ್ ನ ಶಾರದಾ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ಪ್ರಥಮ್ ಎನ್ 591 ಅಂಕ ಪಡೆದು ಟಾಪರ್ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next