ಬೆಂಗಳೂರು: ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಅಭ್ಯರ್ಥಿಗಳಿಗೆ ಜೂನ್ 29ರಿಂದ ಪೂರಕ ಪರೀಕ್ಷೆ ನಡೆಯಲಿದೆ.
1.33 ಲಕ್ಷ ಹುಡುಗರು, 91 ಸಾವಿರ ಹುಡುಗಿಯರು ಸೇರಿ 2.24 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಪರೀಕ್ಷಾ ಕೇಂದ್ರ, ಕೊಠಡಿ ಮೇಲ್ವಿಚಾರಕರು ಸೇರಿ 5700 ಸಿಬ್ಬಂದಿಯನ್ನು ಭದ್ರತೆಗಾಗಿ ನೇಮಿಸಲಾಗಿದೆ.
ಸಮಾಜ ಶಾಸ್ತ್ರ ಅಕೌಂಟೆನ್ಸಿ ಹಾಗೂ ಗಣಿತ ಪರೀಕ್ಷೆ ಮೊದಲ ದಿನ ನಡೆಯಲಿದೆ.
ಆನ್‌ಲೈನ್ ಮೂಲಕ ಪರೀಕ್ಷಾ ಕೇಂದ್ರಕ್ಕೆ ಪ್ರಶ್ನೆ ಪತ್ರಿಕೆ ರವಾನಿಸುವ ವ್ಯವಸ್ಥೆಯ ಪ್ರಾಯೋಗಿಕ ಪ್ರಯತ್ನ ಶುಕ್ರವಾರ ನಡೆಯಲಿದೆ.
ಪ್ರಶ್ನೆ ಪತ್ರಿಕೆ ವಾಹನದ ಮೂಲಕ ಸರಬರಾಜು ಮಾಡುವುದಿಲ್ಲ. ಬದಲಾಗಿ ಆನ್‌ಲೈನ್‌ನಲ್ಲಿ ಕಳುಹಿಸಿಕೊಡಲಾಗು ತ್ತದೆ. ಪ್ರಥಮ ಬಾರಿಗೆ ಪ್ರಾಯೋಗಿಕವಾಗಿ ಮಲ್ಲೇ ಶ್ವರದ ಸರ್ಕಾರಿ ಬಾಲಕರ ಕಾಲೇಜು ಹಾಗೂ ಎಂಇಎಸ್ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಆನ್‌ಲೈನ್ ಮೂಲಕ ಪ್ರಶ್ನೆ ಪತ್ರಿಕೆ ತಲುಪಿಸ ಲಾಗುತ್ತದೆ ಎಂದು ಪಿಯು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.