Advertisement

ವಿಧಾನಸಭೆ ಚುನಾವಣೆ: ಎಲ್ಲೆಡೆ ಬಿರುಸಿನ ಮತದಾನ ಆರಂಭ

08:30 AM May 10, 2023 | Team Udayavani |

ಬೆಂಗಳೂರು: ಕರ್ನಾಟಕ ವಿಧಾನಸಭೆಯ ಚುನಾವಣೆ ದಿನ ಬಂದಿದೆ. ರಾಜ್ಯದ ಎಲ್ಲೆಡೆ ಮುಂಜಾನೆಯಿಂದಲೇ ಬಿರುಸಿನ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ.

Advertisement

ಮತದಾನ ಪ್ರಭುಗಳು ಆಯಾ ಮತಕ್ಷೇತ್ರಕ್ಕೆ ಬಂದು ತಮ್ಮ ಮತವನ್ನು ಚಲಾಯಿಸಿದ್ದಾರೆ. ಹಿರಿಯ ನಾಗರಿಕರು ತಮ್ಮ ಮಕ್ಕಳು, ಮೊಮ್ಮಕ್ಕಳೊಂದಿಗೆ ಬಂದು ತಮ್ಮ ಅಮೂಲ್ಯ ಮತವನ್ನು ಚಲಾಯಿಸಿದರು.

ಎಲ್ಲೆಲ್ಲಿ ಯಾರು ಮತದಾನ ಮಾಡಿದರು:

ಶಿಕಾರಿಪುರ: ಶಿಕಾರಿಪುರದಲ್ಲಿ ಮಾಜಿ ಸಿಎಂ ಬಿಎಸ್‌ ವೈ ಕುಟುಂಬ ಮುಂಜಾನೆಯೇ ತಮ್ಮ ಮತವನ್ನು ಚಲಾಯಿಸಿದರು.

ಬೆಳಗಾವಿ: ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ವಿಶ್ವೇಶ್ವರಯ್ಯ ನಗರದ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ  ಬುಧವಾರ ಬೆಳಗ್ಗೆಯೇ  ತಮ್ಮ ಮತ ಚಲಾಯಿಸಿದರು.

Advertisement

ವಿಜಯಪುರ: ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ

ವಿಜಯಪುರ ನಗರದ ಎಸ್.ಎಸ್. ಹೈಸ್ಕೂಲ್ ಆವರಣದಲ್ಲಿರುವ ಮತಗಟ್ಟೆ 61 ರಲ್ಲಿ ಮತ ಚಲಾಯಿಸಿದರು.

ಪತ್ನಿ ಶೈಲಜಾ, ಪುತ್ರರಾದ ರಾಮನಗೌಡ, ಆದರ್ಶ ಹಾಗೂ ಬೆಂಬಲಿಗರೊಂದಿಗೆ ಆಗಮಿಸಿದ ಶಾಸಕ ಯತ್ನಾಳ, ಮತದಾರರ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ರಂಭಾಪುರಿ ಮಠದ ಬಾಳೆಹೊನ್ನೂರು ಮಠದ ರಂಭಾಪುರಿ ಶ್ರೀಗಳು ಮೊದಲು ಮತದಾನ ಮಾಡಿದರು. ಆ ಬಳಿಕ ಉಳಿದವರು ಮತದಾನ ಮಾಡುವ ದೃಶ್ಯ ಕಂಡು ಬಂತು.

ಶಿರಸಿ: ಅಕಲಂಕ ಪೀಠ ಹೊಂದಿರುವ ತಾಲೂಕಿನ‌ ಶ್ರೀಕ್ಷೇತ್ರ ಸ್ವಾದಿ ಜೈನ ಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಯವರು  ಮತಗಟ್ಟೆಯಲ್ಲಿ ಪ್ರಥಮವಾಗಿ ಆಗಮಿಸಿ ಮತದಾನ ಮಾಡಿದರು.

ಬಳ್ಳಾರಿ: ವಿಧಾನಸಭೆ ಚುನಾವಣೆ ನಿಮಿತ್ತ ಬಳ್ಳಾರಿ ನಗರ ಕ್ಷೇತ್ರದ ಅಭ್ಯರ್ಥಿ ಕೆಆರ್ ಪಿ ಪಕ್ಷದ ಅಭ್ಯರ್ಥಿ ಲಕ್ಷ್ಮಿ ಅರುಣಾ ಅವರು ಮತದಾನ ಸಲ್ಲಿಸಿದರು.

ನಗರದ ಹವಂಬಾವಿಯ ಸರ್ಕಾರಿ ಶಾಲೆಯಲ್ಲಿನ ಮತಗಟ್ಟೆ ಸಂಖ್ಯೆ 5 ಕ್ಕರ ಬೆಳಗ್ಗೆಯೇ ಪುತ್ರಿ ಬ್ರಾಹ್ಮಿಣಿ ಸೇರು ಕುಟುಂಬದವರೊಂದಿಗೆ ಬಂದು  ಸರತಿ ಸಾಲಲ್ಲಿ ನಿಂತ ಲಕ್ಷ್ಮಿ ಅರುಣಾ ಅವರು, ಮೂರನೇಯವರಾಗಿ ಹಕ್ಕು ಚಲಾಯಿಸಿದರು.

ಬೈಂದೂರು/ ಕುಂದಾಪುರ: ಕರಾವಳಿ ಭಾಗದಲ್ಲಿ ಮುಂಜಾನೆಯಿಂದಲೇ ಬಿರುಸಿನ ಮತದಾನ ಆರಂಭವಾಗಿದ್ದು, ಬೈಂದೂರು ವಿಧಾನಸಭಾ ಬಿಜೆಪಿ ಅಭ್ಯರ್ಥಿ ಗುರುರಾಜ್‌ ಗಂಟಿಹೊಳೆ ಅವರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಕೈಲ್ಕೆರೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ102 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಹೆಗ್ಡೆ ಮೊಳಹಳ್ಳಿ ಅವರು ಮತ ಚಲಾಯಿಸಿದರು.

ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಪೂಜಾರಿ ಕನ್ಯಾನ ಶಾಲೆಯಲ್ಲಿ ಮತದಾನ‌ ಮಾಡಿದರು. ಪತ್ನಿ‌ ಹಾಗೂ ಕುಟುಂಬ ಸದಸ್ಯರೊಂದಿಗೆ ಬಂದು ತಮ್ಮ ಮತವನ್ನು ಚಲಾಯಿಸಿದ್ದಾರೆ.

ಉಡುಪಿ/ಕಾರ್ಕಳ: ಉಡುಪಿ ಕಾಂಗ್ರೆಸ್‌ ಅಭ್ಯರ್ಥಿ ಪ್ರಸಾದ್‌ ರಾಜ್‌ ಕಾಂಚನ್‌ ಅವರು ತಮ್ಮ ಕುಟುಂಬದೊಂದಿಗೆ ಬಂದು ಬಡಾನಿಡಿಯೂರು ಬಳಿಯ ಬೂತ್‌ ನಲ್ಲಿ ಮತ ಚಲಾಯಿಸಿದರು. ಉಡುಪಿ ಬಿಜೆಪಿ ಅಭ್ಯರ್ಥಿ ಯಶ್‌ ಪಾಲ್‌ ಸುವರ್ಣ, ಕಾಪು ಕಾಂಗ್ರೆಸ್‌ ಅಭ್ಯರ್ಥಿ ವಿನಯ್‌ ಕುಮಾರ್‌ ಸೊರಕೆ, ಕಾರ್ಕಳ ಪಕ್ಷೇತರ ಅಭ್ಯರ್ಥಿ ಪ್ರಮೋದ್‌ ಮುತಾಲಿಕ್‌ ಸೇರಿದಂತೆ ಇತರರು ತಮ್ಮ ಮತವನ್ನು ಚಲಾಯಿಸಿದ್ದಾರೆ.

ಪುತ್ತೂರು: ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಮುಂಡೂರು ಶಾಲಾ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಮೂಡುಬಿದಿರೆ:

ಶ್ರೀ ಜೈನ ಮಠಾಧೀಶ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರು ಮಠದ ಎದುರುಗಡೆಯೇ ಇರುವ ಡಿಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಮೂಡುಬಿದಿರೆ ಶಾಸಕ, ಬಿಜೆಪಿ ಅಭ್ಯರ್ಥಿ ಉಮಾನಾಥ ಎ. ಕೋಟ್ಯಾನ್ ಮೂಡುಬಿದಿರೆ ಕ್ಷೇತ್ರ ಶಿಕ್ಷಣ ಅಧಿಕಾರಿ ಕಚೇರಿಯಲ್ಲಿ ಬುಧವಾರ ಬೆಳಗ್ಗೆ ಮತದಾನಗೈದರು.

ತಾಂತ್ರಿಕ ದೋಷ: ತಡವಾಗಿ ಆರಂಭವಾದ ಮತದಾನ; ಮತದಾನ ಪ್ರಕ್ರಿಯೆ ವೇಳೆ ಮತದಾನ ಯಂತ್ರದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೆಲವಡೆ ತಡವಾಗಿ ಮತದಾನ ಆರಂಭವಾಯಿತು.

ಅರಂತೋಡು:

ಸುಳ್ಯ ವಿಧಾನಸಭಾ ಕ್ಷೇತ್ರದ  ಸಂಪಾಜೆ ಗ್ರಾಮದ ಗೂನಡ್ಕ ಶಾರದಾ ಶಾಲೆಯ ಬೂತ್ ನಂಬ್ರ 222 ರಲ್ಲಿ ಮತದಾನ ಯಂತ್ರದ ತೊಂದರೆಯಿಂದ ಇಪ್ಪತ್ತು ನಿಮಿಷ ತಡವಾಗಿ 7.20ಕ್ಕೆ ಚುನಾವಣೆ ಪ್ರಾರಂಭವಾಯಿತು. ಕೆಪಿಸಿಸಿ ಮುಖ್ಯ ವಕ್ತಾರ ಹಾಗು ಕೆಪಿಸಿಸಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಟಿ ಎಂ ಶಾಹಿದ್ ತೆಕ್ಕಿಲ್ ಪ್ರಥಮ ಮತದಾನ ಮಾಡಿದರು.

ಬಳ್ಳಾರಿ: ಮತದಾನದ ವೇಳೆ ತಾಂತ್ರಿಕ ದೋಷ ಹಿನ್ನಲೆಯಲ್ಲಿ ಬಳ್ಳಾರಿಯ ಸಂಗನಕಲ್ ಗ್ರಾಮದಲ್ಲಿ ಕೆಲ ಕಾಲ ಮತದಾನ ಸ್ಥಗಿತಗೊಂಡಿದೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದ ಮತಗಟ್ಟೆ ಸಂಖ್ಯೆ 141 ರಲ್ಲಿ ಘಟನೆ ತಾಂತ್ರಿಕ ದೋಷ ಉಂಟಾಗಿದೆ.

ಒಟ್ಟು ಮತಗಟ್ಟೆಗಳು: 58,454

ಚುನಾವಣ ಸಿಬಂದಿ: 4 ಲಕ್ಷ

ಸೂಕ್ಷ್ಮ ಮತಗಟ್ಟೆಗಳು: 11 ಸಾವಿರ +

ಸಖಿ ಮತಗಟ್ಟೆ-996

ದಿವ್ಯಾಂಗ ಮತಗಟ್ಟೆ: 239

ಬುಡುಕಟ್ಟು ಮತಗಟ್ಟೆಗಳು:40

ಯುವಕರು ನಿರ್ವಹಿಸುವ ಮತಗಟ್ಟೆ: 286

ಇವಿಎಂ ಬಳಕೆ

ಬ್ಯಾಲೆಟ್‌ ಯೂನಿಟ್‌-75,603

ಕಂಟ್ರೋಲ್‌ ಯೂನಿಟ್‌-70,300

ವಿವಿಪ್ಯಾಟ್‌-76,202

ಮತ ಎಣಿಕೆ ಕೇಂದ್ರಗಳು: 38

ಒಟ್ಟು  ಇವಿಎಂ

ಬ್ಯಾಲೆಟ್‌ ಯೂನಿಟ್‌-94,841

ಕಂಟ್ರೋಲ್‌ ಯೂನಿಟ್‌-82,580

ವಿವಿಪ್ಯಾಟ್‌-84,145

ಭದ್ರತ ಸಿಬಂದಿ: 1.43 ಲಕ್ಷ

Advertisement

Udayavani is now on Telegram. Click here to join our channel and stay updated with the latest news.

Next