Advertisement
ಈ ಬಾರಿಯ ಚುನಾವಣೆಯಲ್ಲಿಯೂ ಸ್ವೀಪ್ ಸಮಿತಿ ಮೂಲಕ ಇಂತಹ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲ ಮತಗಟ್ಟೆಗಳನ್ನೂ ವಿಭಿನ್ನವಾಗಿ ರೂಪಿಸುವ ಉದ್ದೇಶ ಹೊಂದಲಾಗಿದೆ.
ಯಕ್ಷಗಾನ, ಸಂಸ್ಕೃತಿ, ಪರಿಸರಪ್ರೇಮ, ಉಡುಪಿ ಸೀರೆ, ಕಂಬಳ, ಕ್ಷೇತ್ರದ ಪುರಾತನ ಕಲೆ, ಸಾಂಸ್ಕೃತಿಕ ವೈಭವ, ಪಾರಂಪರಿಕ, ಸಾಂಪ್ರದಾಯಿಕ ಕಲೆ, ಆಚರಣೆಗಳಾದ ಯಕ್ಷಗಾನ, ಕಂಬಳದ ಚಿತ್ರಗಳನ್ನು ಗೋಡೆ ಮೇಲೆ ಬಿಡಿಸುವುದು ಮಾತ್ರವಲ್ಲದೆ, ಮತದಾನದ ದಿನದಂದು ಆ ಮತಗಟ್ಟೆಯನ್ನು ಸಾಂಪ್ರದಾಯಿಕ, ಪಾರಂಪರಿಕ ಕಲೆಗೆ ಪೂರಕವಾಗಿ ಸಿಂಗರಿಸಲಾಗುತ್ತದೆ. ಯಕ್ಷಗಾನ ಸೇರಿದಂತೆ ಸ್ಥಳೀಯ ಕಲೆಗಳಿಗೆ ಅಲ್ಲಿ ಪ್ರಾಮುಖ್ಯತೆಯನ್ನು ನೀಡುವ ಮೂಲಕ ಮತಗಟ್ಟೆಗೆ ಮತದಾರರನ್ನು ಆಕರ್ಷಿಸಲಾಗುತ್ತದೆ. ಬುಡಕಟ್ಟು ಶೈಲಿಯ ಮತಗಟ್ಟೆಗಳಲ್ಲಿ ಬಿದಿರಿನಿಂದ ಸಿದ್ಧಪಡಿಸಿದ ವಸ್ತುಗಳಿಂದ ಅಲಂಕಾರ ಮಾಡಲಾಗುತ್ತದೆ.
Related Articles
ಆಯ್ದ ಮತಗಟ್ಟೆಗಳ ಸಿಂಗಾರಕ್ಕೆ ಕಲಾವಿದರು ಹಾಗೂ ಸರಕಾರಿ ಶಾಲೆಗಳ ಚಿತ್ರಕಲಾ ಶಿಕ್ಷಕರು ಸ್ವೀಪ್ ಸಮಿತಿಗೆ ಸಹಕಾರ ನೀಡಲಿದ್ದಾರೆ. ಅನುದಾನಿತ ಶಾಲೆ ಹಾಗೂ ಕೆಲವು ಚಿತ್ರಕಲಾ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳೂ ನೆರವು ನೀಡುತ್ತಿದ್ದಾರೆ.
Advertisement
ಸೂಕ್ಷ್ಮ,ಅತೀ ಸೂಕ್ಷ್ಮ ಮತಗಟ್ಟೆ ಇನ್ನಷ್ಟೇ ತೀರ್ಮಾನಜಿಲ್ಲೆಯಲ್ಲಿ ಮಾಡಬೇಕಿರುವ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಮತಗಟ್ಟೆಗಳ ವಿವರಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಈ ಬಗ್ಗೆ ಅಂತಿಮ ನಿರ್ಧಾರವಾಗಲಿದೆ ಎಂದು ಮೇಲ್ವಿಚಾರಕರು ತಿಳಿಸಿದ್ದಾರೆ.