ಉಡುಪಿ: ಉಡುಪಿ ಜಿಲ್ಲೆಯ ಒಟ್ಟು ಐದು ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಮತದಾನ ನಡೆದಿದ್ದು ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆಯವರೆಗೆ ಯಶಸ್ವಿಯಾಗಿ ನಡೆಯಿತು ಇದರೊಂದಿಗೆ ಜಿಲ್ಲೆಯಲ್ಲಿ ಶೇ.78.46ರಷ್ಟು ಮಂದಿ ಮತದಾನ ಚಲಾಯಿಸಿದ್ದಾರೆ.
ಈ ಬಾರಿ ಕಾರ್ಕಳ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ನಡೆದಿದ್ದು ಶೇ.81.30 ರಷ್ಟು ಮತದಾನ ನಡೆದಿದೆ, ಅದೇ ರೀತಿ ಉಡುಪಿಯಲ್ಲಿ ಅತಿ ಕಡಿಮೆ ಶೇ. 75.87 ಮತದಾನವಾಗಿದೆ, ಉಳಿದಂತೆ ಕುಂದಾಪುರದಲ್ಲಿ ಶೇ.78.94, ಕಾಪು ಶೇ.78.93, ಹಾಗೂ ಬೈಂದೂರಿನಲ್ಲಿ ಶೇ.77.84 ಮತದಾನವಾಗಿದೆ.
ಮತಗಟ್ಟೆಗಳಲ್ಲಿ ಬೆಳಿಗ್ಗಿನಿಂದಲೇ ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ಬಂದು ಮತದಾನ ಮಾಡಿದ್ದಾರೆ.