ಉಡುಪಿ: ಚುನಾವಣೆ ಹಿನ್ನೆಲೆಯಲ್ಲಿ ಮತದಾನಕ್ಕೆಂದು ಊರಿಗೆ ತರಳುವವರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಜಮಾಯಿಸಿದ್ದರಿಂದ ಪ್ರಯಾಣಿಕರ ಜಾತ್ರೆಯೇ ನೆರೆದಿತ್ತು.
ಬೆಳಗಾವಿ, ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿ-ಧಾರವಾಡ ಸಹಿತವಾಗಿ ಉತ್ತರ ಕರ್ನಾಟಕ ಭಾಗಕ್ಕೆ ಹೋಗುವವರು ಸೋಮವಾರ ಸಂಜೆ 7 ಗಂಟೆಯಿಂದಲೇ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಸೇರಿದ್ದರು. ಕೆಲವು ಬಸ್ ಗಳ ಚುನಾವಣೆ ಕಾರ್ಯಕ್ಕೆ ನಿಯೋಜಿಸಿರುವುದರಿಂದ ಕ್ಲಪ್ತ ಸಮಯಕ್ಕೆ ಬಸ್ ಗಳು ಬಂದಿಲ್ಲ. ಹೀಗಾಗಿ ಪ್ರಯಾಣಿಕರು ಬಸ್ ನಿಲ್ದಾಣದ ಸುತ್ತೆಲ್ಲ ಕುಳಿತಿರುವ ದೃಶ್ಯ ಸಾಮಾನ್ಯವಾಗಿತ್ತು.
ಕೂಲಿ ಕಾರ್ಮಿಕರೇ ಹಚ್ಚಿದ್ದರಿಂದ ಊರು ಕಡೆಗೆ ಹೋಗುವರ ಲಗೇಜ್ ಕೂಡ ಅಷ್ಟೇ ಇದ್ದವು.
ನಿತ್ಯ ಸಂಚಾರದ ಬಸ್ ಸೇವೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಪ್ರಯಾಣಿಕರ ಸಂಖ್ಯೆ ಹಚ್ಚಳವಾಗಿದ್ದರಿಂದ ರಶ್ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದರು.
Related Articles
ಇದನ್ನೂ ಓದಿ: Karnataka Election ದಕ್ಷಿಣ ಕನ್ನಡ-ಕೇರಳ ಗಡಿ ಭಾಗದಲ್ಲಿ ವ್ಯಾಪಕ ಕಟ್ಟೆಚ್ಚರ