Advertisement
ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ದೊರೆತ ಸ್ಪಷ್ಟ ಬಹುಮತ “ನನ್ನಿಂದಲೇ’, “ನನ್ನಿಂದಲೇ’ ಎಂದು ಭಾವಿಸಿದ ನಾಯಕರು, “ನಾನಾಗ ಬೇಕು’, “ನಾನಾಗಬೇಕು’ ಎಂದು ಅಧಿಕಾರದ ಹಿಂದೆ ಬಿದ್ದು ನಾಲ್ಕು ದಿನ ಗಳ ಕಾಲ ರಾಜ್ಯದ ಜನತೆ, ಕಾಂಗ್ರೆಸ್ ಕಾರ್ಯ ಕರ್ತರು, ಮುಖಂಡರಲ್ಲಿ ಗೊಂದಲಕ್ಕೆ ಕಾರಣವಾಗಿದ್ದರು.
Related Articles
ಈ ಚುನಾವಣೆಯಲ್ಲಿ ಹಿರಿಯರು, ಅನುಭವಿಗಳು ಸೇರಿದಂತೆ ಘಟಾನುಘಟಿಗಳೇ ಗೆದ್ದಿರುವುದರಿಂದ ಸಚಿವ ಸಂಪುಟ ರಚನೆ ಅಷ್ಟು ಸುಲಭವಲ್ಲ. ಜಿಲ್ಲೆ, ಜಾತಿ, ಉಪ ಜಾತಿ, ಸಾಮಾಜಿಕ ನ್ಯಾಯ ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ಸಚಿವ ಸಂಪುಟ ರಚಿಸಬೇಕಾಗಿದೆ. ಸ್ಪೀಕರ್ ಆಯ್ಕೆ, ಅಡ್ವೊಕೇಟ್ ಜನರಲ್ ನೇಮಕ, ವಿವಿಧ ನಿಗಮ, ಮಂಡಳಿಗಳ ನೇಮಕಾತಿಯೂ ಆಗಬೇಕಾಗಿದೆ. ಇವೆಲ್ಲದರಲ್ಲೂ ಒಮ್ಮತದ ತೀರ್ಮಾನ ಆಗಬೇಕೇ ವಿನಾ ಭಿನ್ನದಾರಿ ತುಳಿದರೆ ಆಗ ಒಂದೇ ಪಕ್ಷದ ಸಮ್ಮಿಶ್ರ ಸರಕಾರದ ಅನುಭವ ಆಗುತ್ತದೆ.
Advertisement
ಬಿಬಿಎಂಪಿ, ಜಿಲ್ಲಾ, ತಾಲೂಕು ಪಂಚಾಯತ್ ಚುನಾವಣೆಗಳನ್ನು ಕೆಲವೇ ತಿಂಗಳುಗಳಲ್ಲಿ ನಡೆಸಬೇಕಾದ ಅನಿವಾರ್ಯ ಈ ಸರಕಾರದ ಮುಂದಿದೆ. ಈ ನಾಲ್ಕು ಚುನಾವಣೆಗಳನ್ನು ಗೆಲ್ಲುವ ಮೂಲಕ ಜನರ ವಿಶ್ವಾಸ ಉಳಿಸಿಕೊಳ್ಳುವುದು ಅಷ್ಟೇ ದೊಡ್ಡ ಸವಾಲು.
ಆಡಳಿತಕ್ಕೆ ಕಾಯಕಲ್ಪಆಡಳಿತ ಸುಧಾರಣೆ, ಭ್ರಷ್ಟಾಚಾರ ನಿಯಂತ್ರಣ, ಜಾತಿ- ಅಧಿಕಾರಿ ವರ್ಗದಲ್ಲಿ ಉಂಟಾಗಿರುವ ಗುಂಪು ಗಾರಿಕೆ ನಿರ್ಮೂಲನ ಮಾಡಿ ಸರಕಾರಿ ನೌಕರರು ಒಂದೇ ಎಂಬ ಭಾವನೆ ರೂಪಿಸುವ ವಾತಾವರಣ ಸೃಷ್ಟಿಸಲು ಜಾತ್ಯತೀತ ಮನೋಭಾವದಿಂದ ಸರಕಾರ- ಸಚಿವರು ಕೆಲಸ ಮಾಡಬೇಕು. ಜಾತಿ ಹೆಸರಿನಲ್ಲಿ ಸಚಿವರಾಗುವವರು ಜಾತಿವಾದಿಗಳಾದರೆ ಸರಕಾರಕ್ಕೆ ಕೆಟ್ಟ ಹೆಸರು ತಪ್ಪಿದ್ದಲ್ಲ. ಈ ಎರಡು ಶಕ್ತಿ ಕೇಂದ್ರಗಳು ಒಂದೇ ನಾಣ್ಯದ ಎರಡು ಮುಖಗಳಾಗುತ್ತವೆಯೋ ಅಥವಾ ಬೇರೆ ಬೇರೆ ನಾಣ್ಯಗಳಾಗಿ ಚಲಾವಣೆಗಳಾ ಗುತ್ತವೆಯೋ ಕಾದುನೋಡಬೇಕು. ಸವಾಲುಗಳೇನು?
ಕಾಂಗ್ರೆಸ್ ಪ್ರಣಾಳಿಕೆ, ಅದರಲ್ಲೂ ವಿಶೇಷವಾಗಿ 5 ಗ್ಯಾರಂಟಿಗಳನ್ನು ಮೊದಲ ಸಚಿವ ಸಂಪುಟ ಸಭೆಯಲ್ಲೇ ಜಾರಿಗೆ ತರುವ ವಾಗ್ಧಾನ ನೀಡಲಾಗಿದೆ. ಈಗ ರಾಜ್ಯದ ಜನತೆ ಈ ಗ್ಯಾರಂಟಿಗಳು ಯಾವಾಗ ಜಾರಿಗೆ ಬರುತ್ತವೆ ಎಂದು ಕಾಯುತ್ತಿದ್ದಾರೆ. ಇದಕ್ಕೆ ಸಂಪನ್ಮೂಲ ಕ್ರೋ ಡೀಕರಣ ಹೇಗೆ ಎನ್ನುವುದು ಬಹುದೊಡ್ಡ ಪ್ರಶ್ನೆ. ಕೊಟ್ಟ ಭರವಸೆ ಈಡೇರಿಸದಿದ್ದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನರ ವಿಶ್ವಾಸ ಕಳೆದುಕೊಳ್ಳುವ ಭೀತಿಯೂ ಇದೆ. ಕೇವಲ ಗ್ಯಾರಂಟಿಗಳಷ್ಟೇ ಅಲ್ಲ, ಅಭಿವೃದ್ಧಿ ಕಾರ್ಯ ಕ್ರಮಗಳ ಬಗ್ಗೆಯೂ ಸರಕಾರದ ಮೇಲೆ ರಾಜ್ಯದ ಜನತೆ ಅಪಾರ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಅವುಗಳನ್ನು ಈಡೇರಿಸಿದರೆ ಲೋಕಸಭಾ ಚುನಾವಣೆಯಲ್ಲಿ ಇದಕ್ಕಿಂತ ಉತ್ತಮ ಫಲಿತಾಂಶ ಪಡೆಯಬಹುದು. ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರ ಆಡಳಿತಾನುಭವ ಸಹಕಾರಿ ಆಗುವುದರಲ್ಲಿ ಅನುಮಾನವಿಲ್ಲ. ಇವರು ಅಧಿಕಾರಕ್ಕಾಗಿ ರೂಪಿಸಿಕೊಂಡ ಗುಂಪು ರಾಜ ಕಾರಣ ಮರೆತು ಒಮ್ಮನಸ್ಸಿನಿಂದ ದುಡಿಯುವ ಜೋಡೆತ್ತು ಗಳಾಗಬೇಕು ಎಂಬುದೇ ಕನ್ನಡಿಗರ ಅಭಿಲಾಷೆ. – ಎಂ.ಎನ್. ಗುರುಮೂರ್ತಿ