Advertisement
ನಾಳೆ ವಿಶ್ವಾಸಮತ ಯಾಚನೆ ಮುಗಿಸುತ್ತೇವೆ ಎಂದು ಮನವಿ ಮಾಡಿದ ಸಿದ್ದರಾಮಯ್ಯಗೆ, ಎಷ್ಟು ಗಂಟೆಗೆ ಪೂರ್ಣಗೊಳಿಸುತ್ತೀರಿ ಎಂದು ಸ್ಪಷ್ಟವಾಗಿ ಹೇಳಿ ಎಂದು ಸ್ಪೀಕರ್ ತಾಕೀತು ಮಾಡಿದ್ದರು. ಮಂಗಳವಾರ 8ಗಂಟೆಯೊಳಗೆ ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಳಿಸುತ್ತೇವೆ ಎಂದಾಗ ಬಿಜೆಪಿಯ ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದರು. ತದನಂತರ ನಾಳೆ ಮಂಗಳವಾರ 6ಗಂಟೆಗೆ ಅಂತಿಮ ಗಡುವು ಎಂದು ಹೇಳಿ ಕಲಾಪ ಮುಂದೂಡಿದ್ದರು.
ಮುಂದುವರಿದಿತ್ತು. ಏತನ್ಮಧ್ಯೆ ವಿಶ್ವಾಸಮತ ಇಂದೇ ಯಾಚಿಸುವಂತೆ ಸ್ಪೀಕರ್ ರಮೇಶ್ ಕುಮಾರ್ ಸಿಎಂ ಕುಮಾರಸ್ವಾಮಿಗೆ ಸೂಚಿಸಿದ್ದರು. ಮಧ್ಯಾಹ್ನದ ಕಲಾಪದಲ್ಲಿ ಸಿಎಂ ಕುಮಾರಸ್ವಾಮಿ ಕಲಾಪಕ್ಕೆ ಹಾಜರಾಗದೇ ತಮ್ಮ ಕಚೇರಿಯಲ್ಲಿಯೇ ಕುಳಿತಿದ್ದರು. ಕಲಾಪದಲ್ಲಿ ಚರ್ಚೆ ಮುಂದುವರಿದಾಗ
ಬಿಜೆಪಿ ಹಿರಿಯ ಮುಖಂಡ ಬಿಎಸ್ ಯಡಿಯೂರಪ್ಪ ಆಕ್ಷೇಪ ವ್ಯಕ್ತಪಡಿಸಿ, ಇಂದು ರಾತ್ರಿ 1ಗಂಟೆಯಾದರೂ ತೊಂದರೆ ಇಲ್ಲ, ಇವತ್ತೆ ವಿಶ್ವಾಸಮತ ಯಾಚಿಸಿ ಎಂದು ಆಗ್ರಹಿಸಿದರು.
Related Articles
ಸ್ಪೀಕರ್ ಕೃಷ್ಣಾರೆಡ್ಡಿ ಅಧ್ಯಕ್ಷತೆಯಲ್ಲಿ ಕಲಾಪ ಮುಂದುವರಿದಿತ್ತು.
Advertisement
ಆದರೆ ಕಾಂಗ್ರೆಸ್, ಜೆಡಿಎಸ್ ಶಾಸಕರು ಗದ್ದಲ ಮುಂದುರಿಸಿದ್ದರು. ತದನಂತರ ಸ್ಪೀಕರ್ ರಮೇಶ್ ಕುಮಾರ್ ಆಗಮಿಸಿದಾಗ ಮತ್ತೆ ಕಲಾಪ ಆರಂಭವಾಗಿತ್ತು. ಕಾಂಗ್ರೆಸ್ ನ ಕೆಜೆ ಜಾರ್ಜ್, ಆರ್.ವಿ.ದೇಶಪಾಂಡೆ, ಜಮೀರ್ ಅಹ್ಮದ್, ಪ್ರಿಯಾಂಕಾ ಖರ್ಗೆ, ದಿನೇಶ್ ಗುಂಡೂರಾವ್ಮಾತನಾಡಿ ಕಲಾಪ ಮುಂದೂಡುವಂತೆ ಮನವಿ ಮಾಡಿಕೊಂಡರು. ಆದರೆ ಎಷ್ಟು ಹೊತ್ತಾದರೂ ತೊಂದರೆ ಇಲ್ಲ ನಮಗೆ ಊಟದ ವ್ಯವಸ್ಥೆ ಮಾಡಿ. ಇಂದೇ ವಿಶ್ವಾಸಮತ ಯಾಚನೆ ಮುಗಿದುಹೋಗಲಿ ಎಂದು ಬಿಎಸ್ ಯಡಿಯೂರಪ್ಪ ಪಟ್ಟು ಹಿಡಿದಿದ್ದರು.