Advertisement

ಅಭಿವೃದ್ಧಿಯಲ್ಲಿ ದೇಶಕ್ಕೆ ಕರ್ನಾಟಕ ನಂ.1

05:14 PM Apr 05, 2018 | Team Udayavani |

ಹನೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಅಭಿವೃದ್ಧಿಯಲ್ಲಿ ದೇಶದ ಮೊದಲ ಸ್ಥಾನದಲ್ಲಿದೆ ಎಂದು ಸಂಸದ ಆರ್‌. ಧ್ರುವನಾರಾಯಣ್‌ ತಿಳಿಸಿದರು. ವಿಧಾನಸಬಾ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರ ವ್ಯಾಪ್ತಿಯ ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ, ಬಳಿಕ ಗೋಪಿನಾಥಂ ಮತ್ತು ಮಲೆ ಮಹದೇಶ್ವರ ಗ್ರಾಪಂನಲ್ಲಿ ಮುಖಂಡರ ಸಭೆ ನಡೆಸಿ ಮತಪ್ರಚಾರ ಚಾಲನೆ ನೀಡಿದರು.

Advertisement

ಕಾಂಗ್ರೆಸ್‌ 5 ವರ್ಷ ಸುಭದ್ರ ಸರ್ಕಾರ ನೀಡಿದೆ. ಅತ್ಯುತ್ತಮ ಕಾರ್ಯಕ್ರಮಗಳನ್ನು ನೀಡಿದೆ. 5 ವರ್ಷಗಳ ಅವಧಿಯಲ್ಲಿ ಸಚಿವ ಸಂಪುಟದ ಯಾವೊಬ್ಬ ಸಚಿವರೂ ಭ್ರಷ್ಟಾಚಾರ ನಡೆಸದೆ ಸ್ವತ್ಛ ಮತ್ತು ದಕ್ಷ ಆಡಳಿತ ನೀಡಿದ್ದಾರೆ. ದೀನ ದಲಿತರು, ಅಲ್ಪ$ಸಂಖ್ಯಾತರ ಏಳಿಗೆಗಾಗಿ ಅನ್ನಭಾಗ್ಯ, ಕ್ಷೀರಭಾಗ್ಯ, ಮೈತ್ರಿ, ಮನಸ್ವಿನಿಯಂತಹ ಹತ್ತು ಹಲವು ಯೋಜನೆ ಜಾರಿಗೆ ತಂದಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆಗಳು ತಲುಪಿವೆ ಎಂದು ಹೇಳಿದರು.

2013ರ ಚುನಾವಣಾ ಪೂರ್ವದ ಪ್ರಣಾಳಿಕೆಯಲ್ಲಿ 165 ಭರವಸೆಗಳ ಪೈಕಿ 165 ಈಡೇರಿಸಿದ್ದು, ಪ್ರಣಾಳಿಕೆಯಲ್ಲಿ ನೀಡದ ಹಲವು ಯೋಜನೆಗಳನ್ನೂ ಜಾರಿಗೊಳಿಸಿದ್ದಾರೆ.

ಎಸ್ಸಿ, ಎಸ್ಟಿ ಅಭಿವೃದ್ಧಿಗಾಗಿ ಹತ್ತು ಹಲವು ಯೋಜನೆ ಜಾರಿಗೊಳಿಸಿದ್ದಲ್ಲದೆ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ನೀಡುವ ಯೋಜನೆ ಜಾರಿಗೊಳಿಸಿ ದೇಶದಲ್ಲಿಯೇ ಹೆಚ್ಚಿನ ಅನುದಾನ ಮೀಸಲಿರಿಸಿದ್ದಾರೆ. ಎಸ್‌ ಸಿಪಿ ಟಿಎಸ್‌ಪಿ ಯೋಜನೆ ಆಯಾ ಸಾಲಿನಲ್ಲಿಯೇ ಬಳಕೆ ಮಾಡದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡುವ ಕಾನೂನನ್ನೂ ರೂಪಿಸಿದೆ ಎಂದು ತಿಳಿಸಿದರು.

ಹ್ಯಾಟ್ರಿಕ್‌ ಗೆಲುವಿಗೆ ಸಹಕರಿಸಿ: ಶಾಸಕ ನರೇಂದ್ರ ಮಾತನಾಡಿ, 2008ರ ವಿಧಾನಸಭೆ ಚುನಾವಣೆಯಲ್ಲಿ ತಾನು
ಚುನಾವಣೆಗೆ ಸ್ಪರ್ಧಿಸಿದಾಗ ಗೋಪಿನಾಥಂನಿಂದಲೇ ಚುನಾವಣಾ ಪ್ರಚಾರ ಪ್ರಾರಂಭಿಸಿದ್ದೆ. ಆ ಚುನಾವಣೆಯಲ್ಲಿ 27 ಸಾವಿರ ಮತಗಳ ಅಂತರದಿಂದ ಗೆದ್ದು ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ್ದೆ. ಅಂತೆಯೇ ಈ ಬಾರಿಯೂ ಗೋಪಿನಾಥಂನಿಂದಲೇ ಪ್ರಚಾರ ಶುರುಮಾಡಿದ್ದು, ಈ ಬಾರಿ 30 ಸಾವಿರ ಮತಗಳ ಅಂತರದಿಂದ ಜಯಶೀಲನನ್ನಾಗಿಸಿ ಹ್ಯಾಟ್ರಿಕ್‌ ಗೆಲುವಿನ ಸಾಧನೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

Advertisement

ಬೆಟ್ಟಳ್ಳಿ ಮಾರಮ್ಮನಿಗೆ ಪೂಜೆ: ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಮುನ್ನ ಹನೂರು ಪಟ್ಟಣದ ಅಧಿದೇವತೆ ಬೆಟ್ಟಳ್ಳಿ ಮಾರಮ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆಸಲ್ಲಿಸಿ ದೇವಿಯ ದರ್ಶನ ಪಡೆದರು. ಇದೇ ಸಂದರ್ಭದಲ್ಲಿ ಪಟ್ಟಣದ ಮುಖಂಡರಾದ ಡಿ.ದೇವರಾಜು ಶಾಸಕ ನರೇಂದ್ರ ಅವರಿಗೆ ಸೇಬಿನ ಹಾರ ಹಾಕುವ ಮೂಲಕ ವಿಶೇಷ ಸ್ವಾಗತ ಕೋರಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಮರಿಸ್ವಾಮಿ, ತಾಪಂ ಅಧ್ಯಕ್ಷ ರಾಜು, ಜಿಪಂ ಸದಸ್ಯರಾದ ಬಸವರಾಜು, ಶಿವಮ್ಮ, ಮರಗದಮಣಿ, ತಾಪಂ ಸದಸ್ಯರಾದ ಜವಾದ್‌, ನಟರಾಜ್‌, ರಾಜೇಂದ್ರ, ಟಿಎಪಿಸಿಎಂಎಸ್‌ ನಿರ್ದೇಶಕ ಮಾದೇಶ್‌, ಚೆಲುವರಾಜು, ಪಪಂ ಉಪಾಧ್ಯಕ್ಷ ಬಸವರಾಜು, ಸದಸ್ಯರಾದ ರಾಜುಗೌಡ, ವೆಂಕಟೇಶ್‌, ಬೆಟ್ಟ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾದ ಕೊಪ್ಪಾಳಿ ಮಹದೇವ ನಾಯ್ಕ, ದೇವರಾಜು, ಮುಖಂಡರಾದ ಚಿಕ್ಕತಮ್ಮಯ್ಯ, ಕಾಮಗೆರೆ ನಾಗಣ್ಣ, ಮಾದೇಶ್‌, ಸುದೇಶ್‌, ತಾರೀಖ್‌
ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next