Advertisement

ಗೆದ್ದರೆ ಕರ್ನಾಟಕ ಮಾದರಿ ಪಂಚ ಗ್ಯಾರಂಟಿ: ಮಧ್ಯಪ್ರದೇಶದಲ್ಲಿ ಪ್ರಿಯಾಂಕಾ ವಾದ್ರಾ ಘೋಷಣೆ

09:41 PM Jun 12, 2023 | Team Udayavani |

ಭೋಪಾಲ್‌: ಪಂಚ ಗ್ಯಾರಂಟಿಗಳಿಂದ ಕರ್ನಾಟಕ ವಿಧಾನಸಭೆ ಚುನಾವಣೆ ಗೆದ್ದ ಕಾಂಗ್ರೆಸ್‌, ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದಲ್ಲಿಯೂ ಅದೇ ರಣತಂತ್ರ ಪ್ರಯೋಗಿಸಲಿದೆ. ಜಬಲ್ಪುರದಲ್ಲಿ ಸೋಮವಾರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ವಾದ್ರಾ ಆ ರಾಜ್ಯಕ್ಕಾಗಿ ಪಂಚ ಗ್ಯಾರಂಟಿಯನ್ನು ಪ್ರಕಟಿಸಿದ್ದಾರೆ.

Advertisement

“ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿ ಮಹಿಳೆಯರಿಗೂ ತಿಂಗಳಿಗೆ 1,500 ರೂ.ಗಳ ಸಹಾಯಧನ, 500 ರೂ.ಗಳಿಗೆ ಎಲ್‌ಪಿಜಿ ಸಿಲಿಂಡರ್‌, 100 ಯೂನಿಟ್‌ ವಿದ್ಯುತ್‌ ಉಚಿತ, ಹಳೆಯ ಪಿಂಚಣಿ ನೀತಿಯ ಮರು ಜಾರಿ ಹಾಗೂ ಕೃಷಿ ಸಾಲ ಮನ್ನ ಮಾಡುತ್ತೇವೆ'” ಎಂದು ಘೋಷಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ 220 ತಿಂಗಳಲ್ಲಿ 225 ಹಗರಣಗಳನ್ನು ಹುಟ್ಟುಹಾಕಿದೆ. ರಾಜಸ್ಥಾನ, ಹಿಮಾಚಲ ಪ್ರದೇಶ, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಸರ್ಕಾರ ನೀಡಿದ ಭರವಸೆಗಳನ್ನು ಈಡೇರಿಸಿದೆ. ಕರ್ನಾಟಕದಲ್ಲೂ 5 ಗ್ಯಾರಂಟಿಗಳನ್ನೂ ಈಡೇರಿಸಿದೆ. ಮಧ್ಯಪ್ರದೇಶದಲ್ಲೂ ಗೆದ್ದರೆ ನೀಡಿರುವ ಭರವಸೆಗಳನ್ನೆಲ್ಲಾ ಈಡೇರಿಸುವುದಾಗಿ ಪ್ರಿಯಾಂಕಾ ಭರವಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next