Advertisement

ಮಾರ್ಚ್ 15ಕ್ಕೆ ಪರಿಷತ್ ಉಪಚುನಾವಣೆ

10:43 AM Feb 19, 2021 | Team Udayavani |

ಬೆಂಗಳೂರು : ವಿಧಾನ ಪರಿಷತ್ತಿನ ಉಪ ಸಭಾಪತಿಯಾಗಿದ್ದ ದಿವಂಗತ  ಎಸ್ ಎಲ್ ಧರ್ಮೇಗೌಡ ನಿಧನದಿಂದಾಗಿ ತೆರವಾಗಿದ್ದ ಕರ್ನಾಟಕ ವಿಧಾನ ಪರಿಷತ್ತಿನ ಮಾರ್ಚ್ 15 ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

Advertisement

ಉಪ ಚುನಾವಣೆಗೆ ಅಧಿಸೂಚನೆಯನ್ನು ಫೆಬ್ರವರಿ 25ರಂದು ನೀಡಲಾಗುವುದು. ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಾರ್ಚ್ ನಾಲ್ಕನೇ ತಾರೀಕು ಕೊನೆಯ ದಿನಾಂಕ ಹಾಗೂ ವಾಪಾಸ್ ಪಡೆಯಲು ಮಾರ್ಚ್ 8 ಕೊನೆಯ ದಿನಾಂಕವೆಂದು ಚುನಾವಣೆ ಆಯೋಗ ಆದೇಶ ಹೊರಡಿಸಿದೆ.

ಓದಿ : ತುಳು ಚಿತ್ರರಂಗ @50: ‘ಎನ್ನ ತಂಗಡಿ’ ಯಿಂದ ‘ಗಮ್ಜಾಲ್’ ವರೆಗೆ ಚಿತ್ರರಂಗ ನಡೆದು ಬಂದ ಪಯಣ

ಉಪ ಚುನಾವಣೆಯು ಮಾರ್ಚ್ 15 ನೇ ತಾರೀಕಿನಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ರ ತನಕ ನಡೆಯಲಿದೆ. ಚುನಾವಣೆಯ ಮತ ಎಣಿಕೆಯೂ ಅದೇ ದಿನ ನಡೆಯಲಿದ್ದು, ಮಾರ್ಚ್ 18ರೊಳಗೆ ಉಪ ಚುನಾವಣೆಯ ಎಲ್ಲಾ ಪ್ರಕ್ರಿಯೆಗಳು ಕೊನೆಗೊಳ್ಳಲಿದೆ ಎಂದು ಆಯೋಗ ತಿಳಿಸಿದೆ.

ಚುನಾವಣೆಯು ಸರ್ಕಾರದ ಕೋವಿಡ್ ಮಾರ್ಗ ಸೂಚಿಯನ್ನು ಅನುಸರಿಸಿ ನಡೆಯಲಿದೆ ಎಂದು ಕೂಡ ತಿಳಿಸಿದೆ.

Advertisement

64 ವರ್ಷದ ಜೆಡಿ ಎಸ್ ಎಮ್ ಎಲ್ ಸಿ ಎಸ್ ಎಲ್ ಧರ್ಮೇಗೌಡ ಡಿಸೆಂಬರ್ 29ರ ಮುಂಜಾನೆ ಚಿಕ್ಕಮಗಳೂರು ಜಿಲ್ಲೆಯ ರೈಲು ಹಳಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದವು.

ಕಳೆದ ಡಿಸೆಂಬರ್ 15ರಂದು ವಿಧಾನ ಪರಿಷತ್ತಿನಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ನಡೆದ ಗಲಭೆಗೆ ಸಂಬಂಧಿಸಿದಂತೆ ಧರ್ಮೇಗೌಡರು ಬೇಸರಗೊಂಡಿದ್ದರು ಎಂಬ ಸುದ್ದಿ ಆ ಸಂದರ್ಭದಲ್ಲಿ ಹರಿದಾಡಿತ್ತು.

ವಿಧಾನ ಪರಿಷತ್ತಿನ ಆಗಿನ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಯವರ ಸ್ಥಾನದಲ್ಲಿ ಧರ್ಮೇ ಗೌಡರು ಕಾನೂನು ಬಾಹೀರವಾಗಿ ಕೂತಿದ್ದರು ಎಂದು ಆಕ್ಷೇಪಿಸಿ ಕೆಲವು ಕಾಂಗ್ರೆಸ್ ಶಾಸಕರು ಧರ್ಮೇಗೌಡರನ್ನು ಆ ಸ್ಥಾನದಿಂದ ಕೆಳಗಿಳಿಸಿದ್ದರು. ಹಾಗೂ ಇದು ಪ್ರತಾಪ್ ಚಂದ್ರ ಶೆಟ್ಟಿಯವರ ವಿರುದ್ಧ ಅವಿಶ್ವಾಸ ತೋರ್ಪಡಿಸುವುದಕ್ಕೆ ಬಿಜೆಪಿ ಮತ್ತು ಜೆಡಿಎಸ್ ಹೂಡಿದ ಕುತಂತ್ರ ಎಂದು ಕಾಂಗ್ರೆಸ್ ಆರೋಪಿಸಿತ್ತು.

ಓದಿ : ಕರಾವಳಿಯಲ್ಲಿ ಹಲವೆಡೆ ಉತ್ತಮ ಮಳೆ: ಒಣಹಾಕಿದ ಅಡಿಕೆ ಒದ್ದೆ, ರೈತರಿಗೆ ನಷ್ಟ

Advertisement

Udayavani is now on Telegram. Click here to join our channel and stay updated with the latest news.

Next