Advertisement

ಪದವೀಧರ-ಶಿಕ್ಷಕರ ಕ್ಷೇತ್ರ: ವಿಧಾನ ಪರಿಷತ್‌ ಚುನಾವಣೆ; ಶೇ.73.25 ಮತದಾನ;

08:40 PM Jun 13, 2022 | Team Udayavani |

ಬೆಂಗಳೂರು: ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಂದ ವಿಧಾನಪರಿಷತ್ತಿನ ನಾಲ್ಕು ಸ್ಥಾನಗಳ ಚುನಾವಣೆ ಸೋಮವಾರ ಮತದಾನ ನಡೆದದ್ದು, ನಾಲ್ಕೂ ಕ್ಷೇತ್ರಗಳಲ್ಲಿ ಸರಾಸರಿ ಶೇ.73.25ರಷ್ಟು ಮತದಾನವಾಗಿದೆ.

Advertisement

ಮತದಾನ ಬಹತೇಕ ಶಾಂತಿಯುತವಾಗಿ ನಡೆದಿದೆ. ಬೆಳಿಗ್ಗೆ ಮತದಾನ ನೀರಸವಾಗಿತ್ತು. ಮಧ್ಯಾಹ್ನದ ಹೊತ್ತಿಗೆ ಬಿರುಸು ಪಡೆದುಕೊಂಡು ಸಂಜೆ 5 ಗಂಟೆವರೆಗೆ ನಡೆದ ಮತದಾನದಲ್ಲಿ ಶೇ.73.25ರಷ್ಟು ಮತದಾನವಾಗಿದ್ದು, ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಅತಿ ಹೆಚ್ಚು ಹಾಗೂ ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಅತಿ ಕಡಿಮೆ ಮತದಾನ ದಾಖಲಾಗಿದೆ.


ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಮಾಹಿತಿ ಪ್ರಕಾರ ಸಂಜೆ 5ಕ್ಕೆ ಮತದಾನ ಮುಕ್ತಾಯವಾಗಿದ್ದು, ಅದರಂತೆ ಶೇಕಡವಾರು ಮತದಾನ ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಶೇ.59, ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಶೇ.70.06, ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಶೇ.80 ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಶೇ.84ರಷ್ಟು ದಾಖಲಾಗಿದೆ.

ಜಿಲ್ಲಾ ಚುನಾವಣಾಧಿಕಾರಿಗಳಿಂದ ಪೂರ್ಣ ಮಾಹಿತಿ ಬಂದ ಬಳಿಕ ಮತದಾನ ಅಂತಿಮ ಶೇಕಡವಾರು ಪ್ರಮಾಣ ಸ್ಪಷ್ಟವಾಗಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next